ಆವಳ ಅಮ್ಮುನ್ಹಿ ಉಪ್ಪಾಪ ಕುಟುಂಬದ ವತಿಯಿಂದ ಕುರ್ ಆನ್ ಸ್ಪರ್ಧೆಯಲ್ಲಿ ಸಾಧನೆಗೈದ ಹಾಫಿಲ್ ಉಮ್ಮರ್ ಮುಖ್ತಾರ್ ಗೆ ಸನ್ಮಾನ
ಉಪ್ಪಳ: ಚೇರಾಲ್ ಜುಮ್ಮಾ ಮಸೀದಿಯಲ್ಲಿ ನಡೆದ ಸರಳ ಸಮಾರಭದಲ್ಲಿ ಆವಳ ಅಮ್ಮುನ್ಹಿ ಉಪ್ಪಾಪ ಕುಟುಂಬ ಸಮೂಹದ ವತಿಯಿಂದ ಇತ್ತೀಚೆಗೆ ಡಾಕ್ಟರ್ ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಅಖಿಲ ಭಾರತ ಮಟ್ಟದ ಕುರ್ ಆನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಗದು ಬಹುಮಾನ ಹಾಗೂ ಪ್ರಶಸ್ತಿ ಪಡೆದ ಸಿ ಕೆ ಕುಟುಂಬದ ದಿವಂಗತ ಬಿ.ಎಸ್.ಮೊಹಮ್ಮದ್ ಹಾಗು ಶ್ರೀಮತಿ ಬೀಪಾತುಮ್ಮ ದಂಪತಿಯ ಪುತ್ರರಾದ ಹಾಫಿಲ್ ಉಮ್ಮರ್ ಮುಖ್ತಾರ್ ಅವರನ್ನು ಅಮ್ಮುನ್ಹಿ ಉಪ್ಪಾಪ ಕುಟುಂಬದ ಸದಸ್ಯರು ಸೇರಿ ಶಾಲು ಹೊದಿಸಿ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಮೊಹಮ್ಮದ್ ಕುನ್ಹಿ ಸಖಾಫಿ ಆವಳ ಅವರ ದುಆದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯ ಗುರುಗಳಾದ ಬಹುಜನಾಬ್ ಸಾಲಿ ಸಖಾಫಿ ಯವರು ಶುಭಾಶಯ ಕೋರಿದರು.
ಕೆದುಂಬಾಡಿ ಯೂಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನೂ ಕುಟುಂಬ ಸದಸ್ಯರಾದ ನಿವೃತ ಪ್ರಾಂಶುಪಾಲರಾದ ಯೂಸುಫ್ ಹಾಜಿ ಸ್ವಾಗತಿಸಿ, ಎಂಜಿನಿಯರ್ ಹಮೀದ್ ಹಾಜಿ ವಂದಿಸಿದರು.




