SKSSF ಉಕ್ಕುಡ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ
ವಿಟ್ಲ: ಎಸ್ಕೆಎಸ್ಸೆಸ್ಸೆಫ್ ಉಕ್ಕುಡ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮವು ಕೇಪು ಮದರಸ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ಖತೀಬರಾದ ಶಫೀಕ್ ಅಝ್ಹರಿ ಕಕ್ಕಿಂಜೆ ಅವರು ನೆರೆದವರನ್ನು ಸ್ವಾಗತಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಖಾಸಿಮ್ ದಾರಿಮಿ ಸವಣೂರು ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಡಿ.ಎಮ್.ಅಬ್ದುಲ್ ರಹಮಾನ್ ದರ್ಬೆ, ಉಪಾಧ್ಯಕ್ಷರಾಗಿ ಮುಹಮ್ಮದ್ ಅಶ್ರಫ್ ಉಕ್ಕುಡ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಅಝ್ಹರಿ ಕಕ್ಕಿಂಜೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಅನಸ್ ಕೇಪು, ಕೋಶಾಧಿಕಾರಿಯಾಗಿ ಅಬ್ಬಾಸ್ ಟಿ.ಎಚ್.ಎಮ್.ಎ, ಇಬಾದ್ ವಿಭಾಗದ ಕಾರ್ಯದರ್ಶಿಯಾಗಿ ಅಬ್ದುಲ್ಲಾ ದಾರಿಮಿ ಕೇಪು, ವಿಖಾಯ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ ಶಾನ್, ಸಹಚಾರಿ ವಿಭಾಗದ ಕಾರ್ಯದರ್ಶಿಯಾಗಿ ಮುನೀರ್ ದರ್ಬೆ, ಟ್ರೆಂಡ್ ವಿಭಾಗದ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸದ್ದಿಕ್ ಕೇಪು, ಸ್ವರ್ಗಾಲಯ ವಿಭಾಗದ ಕಾರ್ಯದರ್ಶಿಯಾಗಿ ಆಗಿ ಅಹ್ಮದ್ ಮುಹ್ಸೀನ್ ಕೇಪು, ತ್ವಲಾಬ ವಿಭಾಗದ ಕಾರ್ಯದರ್ಶಿಯಾಗಿ ಬಶೀರ್ ಎಸ್.ಎಮ್ ಉಕ್ಕುಡ, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ ಅಬ್, ಕ್ಲಸ್ಟರ್ ಕೌನ್ಸಿಲರ್ ಗಳಾಗಿ ಖಾಸಿಂ ದಾರಿಮಿ, ಇಬ್ರಾಹಿಂ ಹಾಜಿ ಕೇಪು, ಅಬೂಬಕ್ಕರ್ ಹಾಜಿ ಕೇಪು, ಅಬ್ದುಲ್ ಖಾದರ್ ಶಾನಿದ್ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಮುಹಮ್ಮದ್ ಇಶ್ರಾಕ್, ಸುಹೈಲ್, ಶಹದ್, ಅನ್ವರ್ ಅವರು ಆಯ್ಕೆಯಾದರು.
ನೂತನ ಸಮಿತಿಯ ರಚನೆಗಾಗಿ ವಿಟ್ಲ ವಲಯ ಸಮಿತಿಯಿಂದ ವೀಕ್ಷಕರಾಗಿ ಬದ್ರುದ್ದೀನ್ ಅಡ್ಕ, ಸಿರಾಜ್ ಮನಿಲ ಹಾಗೂ ಇಸ್ಮಾಯಿಲ್ ಹನೀಫಿ ಅವರು ಆಗಮಿಸಿದ್ದರು.
ಕೊನೆಯಲ್ಲಿ ಶಫೀಕ್ ಅಝ್ಹರಿ ಅವರು ಧನ್ಯವಾದಗೈದರು.