May 3, 2026

ವಿಟ್ಲ ಜಾತ್ರೋತ್ಸವದಲ್ಲಿ ವೃದ್ಧೆಯ ಕರಿಮಣಿ ಸರ ಎಗರಿಸಿದ ಖದೀಮರು

0
image_editor_output_image1221365434-1769002685051.jpg

ವಿಟ್ಲ: ಇಂದು ದಿ. 21-1-2026 ರಂದು ಬೆಳಗ್ಗೆ 10.30 ಗಂಟೆಗೆ ಕುಳ ಗ್ರಾಮದ, ಅಳಕೆ ಮಜಲು ನಿವಾಸಿ ವೆಂಕಮ್ಮ ಎಂಬುವವರ ಚಿನ್ನದ ಕರಿಮಣಿ ಸರ ಕಳವು ಆದ ಬಗ್ಗೆ ವಿಟ್ಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದಿರಾ ಎಂಬುವವರೊಂದಿಗೆ ವಿಟ್ಲ ಜಾತ್ರೆಗೆ ಚಿನ್ನದ ಕರಿಮಣಿ ಸರ ಧರಿಸಿಕೊಂಡು ವೆಂಕಮ್ಮ ಅವರು ಬಂದಿದ್ದು, ಮಧ್ಯಾಹ್ನ ಸರಿಸುಮಾರು 12.30 ರ ಸಮಯಕ್ಕೆ ದೇವಸ್ಥಾನದಲ್ಲಿ ಪೂಜೆ ಸಮಯದಲ್ಲಿ ಕರಿಮಣಿ ಇದ್ದದ್ದು ಅವರು ಗಮನಿಸಿದ್ದಾರೆ. ನಂತರ ಸುಮಾರು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಚಿನ್ನದ ಕರಿಮಣಿ ಸರ ಕಳೆದು ಹೋಗಿರುವುದು ಅವರ ಗಮನಕ್ಕೆ ಬಂದಿರುತ್ತದೆ. ನಂತರ ಎಲ್ಲಾ ಕಡೆ ಹುಡುಕಾಡಿದರು ಚಿನ್ನ ಪತ್ತೆಯಾಗಿರುವುದಿಲ್ಲ ಈ ಬಗ್ಗೆ ವಿಟ್ಲ ಪೋಲಿಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!