March 5, 2026

ಕನ್ಯಾನ: ಡಿ. 24, 25ರಂದು ದುಲ್ ಫುಖಾರ್ ಸೇವಾ ಟ್ರಸ್ಟ್ ಐತಿಹಾಸಿಕ ಸಿಲ್ವರ್ ಜ್ಯುಬಿಲಿ ಮಹಾ ಸಮ್ಮೇಳನ:  ಯಶಸ್ವಿಗೊಳಿಸಲು ಗಲ್ಫ್ ಕಮಿಟಿ ಕರೆ

0
image_editor_output_image-1422676390-1766460942028

ಕನ್ಯಾನ: ಬಡ ಮತ್ತು ಅನಾಥರಿಗಾಗಿ ಕಾರ್ಯಚರಿಸುತ್ತಿರುವ   2024 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದುಲ್ ಫುಖಾರ್ ಸೇವಾ ಟ್ರಸ್ಟ್  ಚೆಡವು ಕನ್ಯಾನ ಇದರ ಐತಿಹಾಸಿಕ ಸಿಲ್ವರ್ ಜ್ಯುಬಿಲಿ ಮಹಾಸಮ್ಮೇಳನ ಡಿಸೆಂಟರ್ 24 ಮತ್ತು 25ರಂದು ಕನ್ಯಾನ ರಹ್ಮಾನಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.

ವಿದ್ಯಾಭ್ಯಾಸ, ಆರೋಗ್ಯ, ಸಮಾಜ ಸೇವೆ ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಸ್ತುತ್ಯರ್ಹ ಸೇವೆಯನ್ನು ನೀಡುತ್ತಾ ಬರುತ್ತಿದೆ.

ಡಿಸೆಂಬರ್ 24 ರಂದು ಸಂಜೆ 4 ಗಂಟೆಗೆ ಧ್ವಜಾರೋಹಣ ಮತ್ತು ಬದ್ರ್ ಮೌಲಿದಿಗೆ ಸಯ್ಯಿದ್ ಜಅಪರ್ ಸ್ಟಾದಿಕ್ ತಂಙಳ್ ಕುಂಬೋಲ್ ನೇತೃತ್ವ ವಹಿಸಲಿದ್ದಾರೆ.
6.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವು ಸ್ಥಳಿಯ ಧರ್ಮಗುರು ಶೈಖುನಾ ಇಬ್ರಾಹಿಂ ಫೈಝಿ ಕನ್ಯಾನ ರವರ ಅಧ್ಯಕ್ಷತೆಯಲ್ಲಿ ಮಹಮೂದ್ ಫೈಝಿ ವಾಲೆ ಮುಂಡೋವ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಕೂರಿಕುಝಿ ತಂಙಳ್ ದುವಾ ಮಜ್ಲಿಸಿಗೆ ನೇತೃತ್ವ ನೀಡಲಿದ್ದಾರೆ.

ಯುವ ವಿದ್ವಾಂಸ ಮುಹಮ್ಮದ್ ಫಾಝಿಲ್ ನೂರಾನಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಮುಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ ಸಹಿತ ಅನೇಕ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.

ಡಿಸೆಂಬರ್ 25 ರ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಶಹೀರ್ ಹುಸೈನ್ ಜೀಲಾನಿ ಕವರತ್ತಿ ಲಕ್ಷದ್ವೀಪ
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಸಯ್ಯಿದ್ ಅಬ್ದುಲ್ ರಹಿಮಾನ್ ತಂಙಳ್ ಸಾಗರ,‌ ಕೇರಳ ಹಜ್ಜ್ ಕಮಿಟಿ ಚೆಯರ್ಮ್ಯಾನ್ ಡಾ|| ಹುಸೈನ್ ಸಖಾಫಿ ಚುಳ್ಳಿ ಕೋಡು, ವಿಧಾನ ಸಭಾಧ್ಯಕ್ಷ ಯು ಟಿ ಖಾದರ್, ಮಾಜಿ ಸಚಿವ ರಮಾನಾಥ ರೈ, ಎಂ ಎಸ್ ಮುಹಮ್ಮದ್, ಇನಾಯತ್ ಅಲಿ ಸಹಿತ ಸಾಮಾಜಿಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಐತಿಹಾಸಿಕ ಮಹಾ ಸಮ್ಮೇಳನವನ್ನು ವಿಜಯಗೊಳಿಸಲು ದುಲ್ ಫುಖಾರ್ ಗಲ್ಫ್ ಕಮಿಟಿ ಪದಾದಿಕಾರಿಗಳು ಕರೆ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!