February 1, 2026

ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ:ಪ್ರತಿಭೆಪ್ರಕಟವಾಗಲಿ : ಸಮತ ಕಿಶೋರ್         

0
image_editor_output_image-1554941-1765512568211

ಕಲ್ಲಡ್ಕ: ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಪ್ರದರ್ಶಿಸಲು ಸರಿಯಾದ ವೇದಿಕೆ ನಿರ್ಮಾಣ ಮಾಡಿ  ಕೊಟ್ಟಲ್ಲಿ ಅವರ ಅಧ್ಬುತ ಪ್ರತಿಭೆ ಹೊರ ಜಗತ್ತಿಗೆ  ಪರಿಚಯವಾಗಲು  ದೀರ್ಘ ಕಾಲ ಬೇಕಾಗಿಲ್ಲ ಎಂದು ಬೆಂಜನಪದವು ನೆತ್ತರಕೆರೆ ಎಡುವೆಂಚರ್ ಪಿ.ಯು ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು, ಟ್ರಸ್ಟಿಯು ಆದ ಸಮತ ಕೀಶೊರ್ ಅಭಿಪ್ರಾಯ ಪಟ್ಟರು.

ಅವರು  ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಫಾತಿಮಾ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಮಹಮ್ಮದ್ ಹನೀಫ್ ವಹಿಸಿದ್ದರು. ವೇದಿಕೆಯಲ್ಲಿ  ಸಂಚಾಲಕರಾದ ಅಹ್ಮದ್ ಮುಸ್ತಫ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಗೋಳ್ತಮಜಲು, ಮಕ್ಕಳ ಸುರಕ್ಷ ಸಮಿತಿ ಸಲಹೆಗಾರರಾದ  ಹಮೀದ್ ಆಲಿ, ಫಾತಿಮಾ ಮಮೊರಿಯಲ್ ಎಜುಕೇಷನ್ ಟ್ರಸ್ಟಿ ಅಲ್ತಾಫ್ ಅಹ್ಮದ್, ವಿದ್ಯಾರ್ಥಿ ನಾಯಕರಾದ ಆಯಿಷತುಲ್ ನಫಾ, ಮಹಮ್ಮದ್ ಸವ್ವಾನ್ ಉಪಸ್ಥಿತರಿದ್ದರು. ಜೆಮ್ ಆಂಗ್ಲ  ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ನಿರಂಜನ್ ಡಿ   ಸ್ವಾಗತಿಸಿದರು,  ಶಿಕ್ಷಕಿಯರಾದ  ಜಯಂತಿ ವಂದಿಸಿದರು, ನಾಝಿಯ ಕಾರ್ಯಕ್ರಮ ನಿರೂಪಿಸಿದರು…

Leave a Reply

Your email address will not be published. Required fields are marked *

error: Content is protected !!