ಶಾಲಾ ಬಸ್ ಹರಿದು ವಿದ್ಯಾರ್ಥಿನಿ ಸಾವು
ಬೀದರ್: ತಾನು ಶಾಲೆಯಿಂದ ಬಂದ ಬಸ್ ನ ಅಡಿಗೆ ಸಿಲುಕಿ ವಿಧ್ಯಾರ್ಥಿನಿಯೊಬ್ಬಳು ಸಾವನಪ್ಪಿದ ಘಟನೆ ಘಟನೆ ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ 8 ವರ್ಷ ಪ್ರಾಯದ ರುತ್ವಿ ಎಂದು ಗುರುತಿಸಲಾಗಿದೆ.
ಬಾಲಕಿ ರುತ್ವಿ, ಇಂದು (ಡಿಸೆಂಬರ್ 09) ಶಾಲೆ ಮುಗಿಸಿಕೊಂಡು ಇನ್ನೇನು ಬಸ್ ಇಳಿದು ಮನಗೆ ಹೋಗಬೇಕೆನ್ನುವಷ್ಟರಲ್ಲೇ ವಿಧಿ ಬಲಿಪಡೆದುಕೊಂಡಿದೆ.
ರುತ್ವಿ ಬಸ್ ಇಳಿದು ನಿಂತಿದ್ದನ್ನು ಗಮನಿಸದ ಡ್ರೈವರ್ ಮುಂದಕ್ಕೆ ಚಾಲನೆ ಮಾಡಿದ್ದಾನೆ. ಈ ವೇಳೆ ಬಸ್ನ ಹಿಂಬದಿ ಚಕ್ರಕ್ಕೆ ಸಿಲುಕಿ ಬಾಲಕಿ ರುತ್ವಿ ಸಾವನ್ನಪ್ಪಿದ್ದಾಳೆ.





