ಜಾಮೀನು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ್ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಮತ್ತೆ ಆಘಾತವಾಗಿದೆ. ಜಾಮೀನು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್ ವಜಾ ಮಾಡಿದೆ.
ವಿಜಯ್ ಕುಲಕರ್ಣಿ ಅರ್ಜಿಗೆ ಸಿಬಿಐ ಕೂಡ ಆಕ್ಷೇಪಣೆ ಎತ್ತಿತ್ತು. ಪ್ರಮುಖ ಸಾಕ್ಷಿಗಳು ಯಾರೆಂದು ಆರೋಪಿ ನಿರ್ಧರಿಸಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡದಂತೆ ವಕೀಲರು ಮನವಿ ಮಾದಿದ್ದರು.




