July 3, 2026

ಮಂಗಳೂರು: ಮದುವೆ ಇಷ್ಟವಿಲ್ಲ ಎಂದು ಹೇಳಿದ್ದ ಯುವಕ ನಾಪತ್ತೆ

0
image_editor_output_image-1649866010-1765268645818.jpg

ಮಂಗಳೂರು: ಯುವಕನೊಬ್ಬ ಮದುವೆ ಆಮಂತ್ರಣ ಪತ್ರಿತೆಯನ್ನು ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ನೀಡಲು ಇದೆ ಎಂದು ಮನೆಯಿಂದ ಹೋದವ ಕಾಣೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾಣೆಯಾದ ಯುವಕನನ್ನು ರಕ್ಷಣ್ ಜೆ.ಕೆ (32) ಎಂದು ಗುರುತಿಸಲಾಗಿದೆ. ಡಿಸೆಂಬರ್ 6 ರಂದು ತನ್ನ ತಾಯಿಯ ಕಾರಿನಲ್ಲಿ ಹೊರಟು ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಆಮಂತ್ರಣ ಪತ್ರ ನೀಡಿ ಬರುತ್ತೇನೆಂದು ಹೇಳಿ ಹೋದವರು ಕಾಣೆಯಾಗಿರುವ ಬಗ್ಗೆ ಪ್ರಕರಣ ದಕ್ಷಿಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ಡಿಸೆಂಬರ್ 6 ರಂದು ರಾತ್ರಿ 10:30 ಗಂಟೆಗೆ ನಗರದ ಟೌನ್‍ಹಾಲ್ ಬಳಿ ಕಾರು ಪತ್ತೆಯಾಗಿರುತ್ತದೆ.

ಕಾಣೆಯಾದವರ ಚಹರೆ: 5.8 ಅಡಿ ಎತ್ತರ, ಸಧೃಡ ಶರೀರ, ಗೋಧಿ ಮೈ ಬಣ್ಣ, ಕಪ್ಪು ಕೂದಲು, ತಿಳಿ ನೀಲಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ತುಳು ಕನ್ನಡ,ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.

ಯುವಕ ತನಗೆ ಮದುವೆ ಇಷ್ಟವಿಲ್ಲ ಎಂದು ಮನೆಯವರ ಬಳಿ ಹೇಳಿದ್ದರೂ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಶನಿವಾರ ಮನೆಯಿಂದ ತೆರಳಿದ್ದ ಅವರು ಮಧ್ಯಾಹ್ನದ ರೈಲಿನಲ್ಲಿ ಚೆನ್ನೈಗೆ ಹೋಗಿದ್ದಾರೆ. ಸೋಮವಾರ ಮೊಬೈಲ್‌ ಕರೆ ಸ್ವೀಕರಿಸಿದ್ದು, ತಾನು ಚೆನ್ನೈಯಲ್ಲಿರುವುದಾಗಿ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಲೋಕೇಷನ್‌ ಸರ್ಚ್‌ ಮಾಡಿದಾಗ ಚೆನ್ನೈಯಲ್ಲಿರುವುದು ದೃಢಪಟ್ಟಿದೆ. ಮರಳಿ ಮಂಗಳೂರಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!