March 18, 2026

ಮಂಗಳೂರಿನಲ್ಲೂ ಡಿಸೆಂಬರ್ 13ರವರೆಗೆ ಇಂಡಿಗೋ ವಿಮಾನ ಸಂಚಾರ ಇಲ್ಲ

0
image_editor_output_image-1048737930-1765177824038.jpg

ಮಂಗಳೂರು: ಇಂಡಿಗೋ ವಿಮಾನ ಸೇವೆಯ ಸಮಸ್ಯೆ ಮುಂದುವರೆದಿದ್ದು, ಮಂಗಳೂರಿನಲ್ಲೂ ಬಹುತೇಕ ಇಂಡಿಗೋ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಇದೀಗ ಡಿಸೆಂಬರ್ 8 ರಿಂದ 13 ರವರೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ಹೊರಡುವ ಒಟ್ಟು 44 ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳೂರು ಪ್ರವಾಸ

ಮಂಗಳೂರು-ಮುಂಬೈ, ಮುಂಬೈ-ಮಂಗಳೂರು ನಡುವೆ ಇಂಡಿಗೋ ವಿಮಾನ ಸಂಚಾರ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ. ಮಂಗಳೂರಿನಿಂದ ಹೊರ ರಾಷ್ಟ್ರಗಳಿಗೆ ಇಂಡಿಗೋ ವಿಮಾನ ಸಂಚಾರ ಇಲ್ಲ. ಕೇವಲ ಏರ್ ಇಂಡಿಯಾ ಎಕ್ _ಪ್ರೆಸ್ ವಿಮಾನಗಳು ದೇಶಿಯ ಹಾಗೂ ಅಂತಾರಾಷ್ಟ್ರೀಯ ಸಂಚಾರ ನಡೆಸುತ್ತಿವೆ.

ಕಳೆದ ಮೂರು ದಿನಗಳಿಂದ ಇಂಡಿಗೋ ವಿಮಾನ ಸಂಚಾರ ರದ್ದತಿಯಿಂದಾಗಿ ದೇಶೀಯ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಮಂಗಳೂರಿನಿಂದ ಮುಂಬೈ, ಬೆಂಗಳೂರು ಮೂಲಕ ಬೇರೆ ಕಡೆಗಳಿಗೆ ಪ್ರಯಾಣಿಸಿದ ಮಂದಿ ಇಂಡಿಗೋ ಮರು ಪ್ರಯಾಣ ರದ್ದತಿಯಿಂದ ಅಲ್ಲೇ ಸಿಕ್ಕಿಹಾಕಿಕೊಂಡ ವಿದ್ಯಮಾನ ನಡೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!