ವಿಟ್ಲ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಪುಣ್ಯ ಸ್ಮರಣೆಯ ಮಹಾಪರಿನಿರ್ವಾಣ ದಿನಾಚರಣೆ
ವಿಟ್ಲ: ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ ಹಾಗೂ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಪುಣ್ಯ ಸ್ಮರಣೆಯ ಮಹಾಪರಿನಿರ್ವಾಣ ದಿನ ಕಾರ್ಯಕ್ರಮವು ಪುತ್ತೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಹಾಗೂ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರ ನೇತೃತ್ವದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು,


ಸಂವಿಧಾನ ಶಿಲ್ಪಿ, ಬಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ನಿವೃತ್ತ ಅಧ್ಯಾಪಕ ನಾರಾಯಣ ನಾಯ್ಕ ನೀರ್ಕಜೆ, ಪ್ರೇಮಲತಾ ನೀರ್ಕಜೆ,ನಿವೃತ ಆಕಾಶವಾಣಿ ಉದ್ಯೋಗಿ ಆನಂದ ನಾಯ್ಕ ಕೊಪ್ರೆ ವ್ಯಾಪಾರಸ್ಥರು ರವರುಗಳು ಕಾಂಗ್ರೆಸ್ ಪಕ್ಷದದಲ್ಲಿ ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ತೊಡಗಿಸಿಕೊಳ್ಳಲು ಇಂದು ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು,
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ್ ವಿಟ್ಲ, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರೇಮಲತಾ ಕಟ್ಟೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ದ.ಕ ಜಿಲ್ಲಾ ಎಸ್ ಟಿ ಘಟಕದ ಉಪಾಧ್ಯಕ್ಷ ಕೇಶವ ನಾಯ್ಕ,ಬ್ಲಾಕ್ ವಕ್ತಾರರಾದ ಶ್ರೀಧರ್ ಶೆಟ್ಟಿ ಪುಣಚ, ಬ್ಲಾಕ್ ಉಪಾಧ್ಯಕ್ಷರುಗಳಾದ ಎಂ ಕೆ ಮೂಸಾ, ಜಯರಾಂ ಬಲ್ಲಾಳ್, ದಿನಕರ ಆಳ್ವ, ಮೊಹಮ್ಮದ್ ಷರೀಫ್ ಬಲ್ನಾಡು, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷೆ ಶ್ರೀನಿವಾಸ್ ಶೆಟ್ಟಿ ಕೊಲ್ಯ, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ವಿ ಕೆ ಎಂ ಅಶ್ರಫ್, ವಿ ಅಬ್ದುಲ್ ರಹಿಮಾನ್(ಹಸೈನಾರ್ ನೆಲ್ಲಿಗುಡ್ಡೆ), ಲತಾವೇಣಿ ಅಶೋಕ್ ಪೂಜಾರಿ, ಪದ್ಮಿನಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಧರ ಬಾಳೆಕಲ್ಲು, ವಿಕೆಯಂ ಹಂಝ,ಬ್ಲಾಕ್ ಸಂಘಟನಾ ಕಾರ್ಯದರ್ಶಿ ಸಮೀರ್ ಪೆರುವಾಯಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಮಿಶೆಲ್ ಸ್ಮಿತಾ ಮಾರ್ಟಿಸ್, ಬ್ಲಾಕ್ ಕಾರ್ಯದರ್ಶಿ ಸಿರಾಜ್ ಮಾಣಿಲ, ವಿಟ್ಲ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ಕುರುಂಬಳ, ವಲಯಾಧ್ಯಕ್ಷರುಗಳಾದ ಸೀತಾರಾಮ ಶೆಟ್ಟಿ ಮುಳಿಯ, ವಿಷ್ಣು ಕುಮಾರ್ ಭಟ್, ಸಂತೋಷ್ ರೈ, ಕೇಶವ ಪೆಲತ್ತಡಿ, ಆದಂ ಕೆದುವಡ್ಕ, ಪ್ರವೀಣ್ ಶೆಟ್ಟಿ ಅಳಕೆಮಜಲ್, ಕೋಟಿ ಪೂಜಾರಿ, ಅಬ್ದುಲ್ ನಾಸಿರ್ ಕೋಲ್ಪೆ, ಪಿ ಜೆ ಜೋನ್ಸನ್, ಶೇಕ್ ಅಲಿ ಸೆರಾಜೆ, ಚಂದಪ್ಪ ಪೂಜಾರಿ, ಝೆವಿಯರ್ ಡಿಸೋಜ, ರಾಜೇಂದ್ರ ರೈ ಪೆರುವಾಯಿ, ಸದಾಶಿವ ಶೆಟ್ಟಿ ಅಳಿಕೆ, ಸೇರಿದಂತೆ ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.





