March 20, 2026

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ ವತಿಯಿಂದ ಉಚಿತ ಆರೋಗ್ಯ ಶಿಬಿರ

0
image_editor_output_image620019162-1764605442766

ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿ, ಸ್ಪೀಡಿ ಮಲ್ಟಿ ಮೋಡ್ಸ್, ಪ್ರಜ್ಞ ಸಲಹಾ ಸಲಹಾ ಕೇಂದ್ರ ಕಂಕನಾಡಿ, ಮಂಗಳೂರು,ಎಜೆ ಹಾಸ್ಪಿಟಲ್ ಕುಂಟಿಕಾನ ಮಂಗಳೂರು ಹಾಗೂ ಸಮುದಾಯ ಆರೋಗ್ಯ ಕೇಂದ್ರ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕ ಅಧ್ಯಕ್ಷ ಬಿ ಸಂದೇಶ ಶೆಟ್ಟಿ ಅವರ ನೇತೃತ್ವದಲ್ಲಿ, ದಕ್ಷಿಣ ಕನ್ನಡ ಹಿರಿಯ‌‌ ಪ್ರಾಥಮಿಕ ಶಾಲೆ ಕಡಂಬುವಿನಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು.

ಈ ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ,
ಇಸಿಜಿ ತಪಾಸಣೆ, ಕಿವಿ, ಮೂಗು, ಗಂಟಲು, ಚರ್ಮ ರೋಗ ತಪಾಸಣೆ, ಜೊತೆಗೆ ಬಿ ಪಿ ಶುಗರ್, ಚೆಕಪ್, ಮುಂತಾದ ಎಲ್ಲಾ ತಪಾಸಣೆಗಳು ಒಂದೇ ಸೂರಿನಡಿ ಏರ್ಪಡಿಸಿ ಜನ ಮೆಚ್ಚುವ ಈ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರ ಕ್ಕಿಂತಲೂ ಅಧಿಕ ಜನರು ಇದರ ಸದುಪಯೋಗವನ್ನು ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹಸೈನಾರ್, ಮುಖ್ಯ ಶಿಕ್ಷಕಿ ಶ್ರೀಮತಿ, ಗೀತಾ ಮೇಡಂ, ಪ್ರಜ್ಞಾ ಸಲಹ ಕೇಂದ್ರದ ಪ್ರಾಂಶುಪಾಲೆ, ಶ್ರೀಮತಿ ವಿಜಯ ಶೆಟ್ಟಿ, ಎ ಜೆ ಹಾಸ್ಪಿಟಲ್ ನ ವೈದ್ಯಕೀಯ ಸೋಶಿಯಲ್ ವರ್ಕರ್, ಗಣೇಶ್ ಚಾರ್ಮಾಡಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಸಮನ್ ಶೆಟ್ಟಿ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸಕ್ರಿಯ ಸದಸ್ಯರಾದ ಚಂದ್ರಹಾಸ ಗೌಡ ಬನ, ರಾಘವ ಗೌಡ ಬನ, ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ಶಫೀರ್, ಮುರಳಿ ಎತ್ತು ಕಲ್ಲು, ಆರೋಗ್ಯ ಸಹಾಯಕಿ ಗೀತಾ, ಹಾಗೂ ಆಶಾ ಕಾರ್ಯಕರ್ತೆಯರು, ಎಜೆ ಹಾಸ್ಪಿಟಲ್ ನ ಸುಮಾರು 20 ಜನ ವೈದ್ಯಕೀಯ ವಿದ್ಯಾರ್ಥಿಗಳು, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮವನ್ನ ಶ್ರೀ ಬಿ ಸಂದೇಶ್ ಶೆಟ್ಟಿ ಯವರು ನಿರೂಪಿಸಿ, ಸ್ವಾಗತಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

Leave a Reply

Your email address will not be published. Required fields are marked *

error: Content is protected !!