ಕಾಸರಗೋಡು: ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿ ನಿಗೂಢ ಸಾವು
ಕಾಸರಗೋಡು: ಕಾಸರಗೋಡು ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ದೇಳಿ ನಿವಾಸಿ ಮುಬಶ್ಮಿರ್(30) ಮೃತಪಟ್ಟ ವಿಚಾರಣಾಧೀನ ಕೈದಿ.
ಬುಧವಾರ ಮುಂಜಾನೆ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ಮುಬಶ್ಮಿರ್ ನನ್ನು ಜೈಲು ಸಿಬ್ಬಂದಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸಾವಿಗೆ ನಿಖರ ಕಾರಣ ಬಂದಿಲ್ಲ.
ಈ ಮಧ್ಯೆ ಇದೊಂದು ಕೊಲೆ ಕೃತ್ಯ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.





