March 22, 2026

ಸುಳ್ಯ: ಸೋಣಂಗೇರಿ ಸಮೀಪ ತೋಡಿನ ಬಳಿ ಅಪರಿಚಿತ ಮೃತ ಶರೀರ ಪತ್ತೆ

0
IMG-20211227-WA0009.jpg

ಸುಳ್ಯ: ಸೋಣಂಗೇರಿ ಸಮೀಪ ಜಿಬಡ್ಕ ನೀರಿನ ತೋಡಿನ ಬಳಿ ಅಪರಿಚಿತ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಇಂದು ಕಂಡುಬಂದಿದೆ.

ಈ ಪರಿಸರದ ಹೆಲ್ಮೆಟ್ ವ್ಯಾಪಾರಿ ಓರ್ವ ಕಳೆದ ಎರಡು ದಿನಗಳಿಂದ ಈ ಪರಿಸರದಲ್ಲಿ ದುರ್ವಾಸನೆ ಬರುತ್ತಿದ್ದುದನ್ನು ಕಂಡು ತಾನು ದುರ್ವಾಸನೆ ಬರುತ್ತಿದ್ದ ಕಡೆಗೆ ತೆರಳಿ ವೀಕ್ಷಿಸಿದಾಗ ಒಬ್ಬ ವ್ಯಕ್ತಿಯ ಮೃತಶರೀರ ಕೊಳೆತ ಸ್ಥಿತಿಯಲ್ಲಿ ಕಂಡಿದೆ.

ಕೂಡಲೇ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ತಿಳಿಸಿದಾಗ ಸ್ಥಳೀಯ ನಿವಾಸಿಗಳಾದ ಆರ್ ಬಿ ಬಶೀರ್, ಅಜಿಜ್ ಸೋಣಂಗೇರಿ, ಸಿಯಾಬ್ ಮೊದಲಾದವರು ಸೇರಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನು ತಿಳಿಯಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!