ಮಂಗಳೂರು: ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ಫಿಸಿಯೋಥರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಉದ್ಘಾಟನೆ: ಮಂಗಳೂರಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ: ಡಾ. ಅಬ್ದುಲ್ ಬಶೀರ್ ವಿ ಕೆ
ಮಂಗಳೂರು: ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ಪಿಸಿಯೋಥರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಇದರ ಪ್ರಥಮ ಮಂಗಳೂರು ಘಟಕದ ಉದ್ಘಾಟನೆಯನ್ನು ಕನಚೂರು ಹೆಲ್ತ್ ಸೈನ್ಸ್ ಅಡ್ವೈಸರಿ ಕೌನ್ಸಿಲ್ ಇದರ ಚೇರ್ಮೇನ್ ಡಾ ಮುಹಮ್ಮದ್ ಇಸ್ಮಾಯಿಲ್ ಹೆಜಮಾಡಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತಾಡಿದ ಅವರು ಜನಪ್ರಿಯ ಇನ್ಸ್ಟಿಟ್ಯೂಟ್ ಚೇರ್ಮೇನ್ ಬಶೀರ್, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳೆದವರು, ಸಮಾಜಕ್ಕೆ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಪಡೀಲ್ ನಲ್ಲಿರುವ ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜನಪ್ರಿಯ ಫೌಂಡೇಶನ್ ಚೇರ್ಮೇನ್, ಡಾ|ಅಬ್ದುಲ್ ಬಶೀರ್ ವಿಕೆ ಮಾತನಾಡಿ, ಜನಪ್ರಿಯ ಇನ್ಸ್ಟಿಟ್ಯೂಟ್ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಡಿಮೆ ಶುಲ್ಕದಲ್ಲಿ ಮಂಗಳೂರಿನ ಹೃದಯ ಭಾಗದಲ್ಲಿ ನಾವು ಇನ್ಸ್ಟಿಟ್ಯೂಟ್ ಆರಂಭ ಮಾಡಿದ್ದೇವೆ. ಮಂಗಳೂರಿನಲ್ಲಿ ಇದು ನಮ್ಮ ಮೊದಲ ಹೆಜ್ಜೆ, ಇದಿನ್ನೂ ಉನ್ನತಿಗೆ ತಲುಪಲಿದೆ ಎಂದು ಹೇಳಿದರು.
ಸಭೆಯಲ್ಲಿ ಬೆಂಗಳೂರು ಇದರ ಸೆನೆಟ್ ಮೆಂಬರ್ ಡಾ ವೈಶಾಲಿ ಶ್ರೀಜಿತ್, ಡಾ ಮುಹಮ್ಮದ್ ಸುಹೈಲ್, ಚೇರ್ಮೇನ್ ಬೋರ್ಡ್ ಆಫ್ ಸ್ಟಡೀಸ್ ಪಿಸಿಯೋತರಫಿ RGUHS ಬೆಂಗಳೂರು, ಡಾ ಅಮರ್ ಪ್ರಕಾಶ್, ಪ್ರಿನ್ಸಿಪಾಲ್ ಸಿಟಿ ಕಾಲೇಜು ಆಫ್ ಫಿಸಿಯೋತರಫಿ, ಡಾ ಕಿರಾಶ್ ಪರ್ತಿಪ್ಪಾಡಿ, ಡೈರೆಕ್ಟರ್, ಸಿಇಒ ಜನಪ್ರಿಯ ಹಾಸ್ಪಿಟಲ್, ಡಾ ನುಮಾನ್ ಡೈರೆಕ್ಟರ್ ಜನಪ್ರಿಯ ಹಾಸ್ಪಿಟಲ್, ಡಾ ಪ್ರವೀಣ್ ಪ್ರಿನ್ಸಿಪಾಲ್, ಜನಪ್ರಿಯ ಕಾಲೇಜ್ ಆಫ್ ನರ್ಸಿಂಗ್ ಆಂಡ್ ಪ್ಯಾರಾಮೆಡಿಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್ ಹಾಸನ ಮತ್ತು ಕಿಝಾಲ್ ಅಡ್ಮಿನ್, ಜನಪ್ರಿಯ ಕಾಲೇಜ್ ಆಂಡ್ ಅಲೈಡ್ ಸೈನ್ಸ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ನೀಲಾವತಿ ನಿರೂಪಿಸಿ, ಡಾ ಶಿಫಾನಿ ಧನ್ಯವಾದ ಹೇಳಿದರು.




