ಚಿಕ್ಕಮಗಳೂರು: ಆಸ್ತಿಗಾಗಿ ತಾಯಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪುತ್ರಿ
ಚಿಕ್ಕಮಗಳೂರು: ಆಸ್ತಿಗಾಗಿ ಮಗಳೇ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್‌ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ನಡೆದಿದೆ.
ಮೃತ ತಾಯಿಯನ್ನು 62 ವರ್ಷದ ಕುಸುಮ ಎಂದು ಗುರುತಿಸಲಾಗಿದೆ. 35 ವರ್ಷದ ಸುಧಾ ತನ್ನ ಸಾಕು ತಾಯಿಯನ್ನ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಮಗಳು. ತಾಯಿಯನ್ನ ಕೊಲೆಗೈದಿದ್ದ ಮಗಳು ಆರಂಭದಲ್ಲಿ, ರಾತ್ರಿ ಮಲಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಕಥೆ ಕಟ್ಟಿದ್ದಳು.
ಆದರೆ, ಪೊಲೀಸರ ತನಿಖೆಯ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.




