March 18, 2026

ಪ್ಲಾಸ್ಟಿಕ್ ಸಾಚೆಟ್‍ಗಳಲ್ಲಿ ಗಾಂಜಾ ಮಾರಾಟ: 6.5 ಕೆ.ಜಿ ಗಾಂಜಾ ವಶ ಸಹಿತ ಆರೋಪಿಯ ಬಂಧನ

0
image_editor_output_image-375215750-1762580950507.jpg

ಬಂಟ್ವಾಳ: ಬಂಟ್ವಾಳ ವಲಯ ವ್ಯಾಪ್ತಿಯ ಬಿ.ಸಿರೋಡ್ ಸೋಮಯಾಜಿ ಹಾಸ್ಪಿಟಲ್ ಬಳಿ ಇರುವ ರೈಲ್ವೆ ಹಳಿ ಹತ್ತಿರ ಸಂತೋಷ್ ಸೋಂಕರ್(28) ಎಂಬಾತನು 1173 ಪ್ಲಾಸ್ಟಿಕ್ ಸಾಚೆಟ್‍ಗಳಲ್ಲಿ ಗಾಂಜಾ ಅಮಲು ಪದಾರ್ಥವನ್ನು ಹೊಂದಿದ್ದು,

ಬುಧವಾರ ಒಟ್ಟು 6.590 ಕೆ.ಜಿ ಗಾಂಜಾ ಉಂಡೆಗಳನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸಿ ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಆರೋಪಿಯನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಅಬಕಾರಿ ಉಪ ಆಯುಕ್ತರ ಮತ್ತು ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಂತೆ ಬಂಟ್ವಾಳ ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ ಹಾಗೂ ಅಬಕಾರಿ ಪೇದೆ ಪ್ರಕಾಶ್, ಬಸವರಾಜ, ಶ್ರೀನಿವಾಸ ಅವರು ಈ ಪ್ರಕರಣದ ಪತ್ತೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!