February 1, 2026

ಕಾಸರಗೋಡು: ನಿಯಂತ್ರಣ ತಪ್ಪಿ ರಸ್ತೆ ಬದಿ ಗೊಡೆಗೆ ಸ್ಕೂಟರ್ ಢಿಕ್ಕಿ: ವಿದ್ಯಾರ್ಥಿನಿ ಮೃತ್ಯು

0
image_editor_output_image-1160585279-1762495606771.jpg

ಕಾಸರಗೋಡು: ಸ್ಕೂಟರ್ ಒಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೊಡೆಗೆ ಡಿಕ್ಕಿ ಹೊಡೆದ ಪರಿಣಾಮ 10ನೇ ತರಗತಿ ವಿಧ್ಯಾರ್ಥಿನಿ ಸಾವನಪ್ಪಿದ ಘಟನೆ ಕಾಸರಗೋಡಿನ ಕುಂಬಳದಲ್ಲಿ ಗುರುವಾರ ನಡೆದಿದೆ.

ಮೃತರನ್ನು ಬಂಬ್ರಾಣದ ಚೂರಿತ್ತಡ್ಕದ ರಜಾಕ್ ಅವರ ಪುತ್ರಿ ರಿಜ್ವಾನಾ(15) ಎಂದು ಗುರುತಿಸಲಾಗಿದೆ. ರಿಜ್ವಾನಾ ಮತ್ತು ಆಕೆಯ ಸ್ನೇಹಿತೆ ಸ್ಕೂಟರ್‌ನಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದರು. ಅಷ್ಟರಲ್ಲಿ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಯಿತು. ರಿಜ್ವಾನಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!