February 1, 2026

ಮಂಗಳೂರು: ದ್ವಿಚಕ್ರ ವಾಹನ ಚಲಾಯಿಸಿದ ಅಪ್ರಾಪ್ತ ಬಾಲಕ: ವಾಹನ ಮಾಲೀಕರಿಗೆ 26,000 ರೂ. ದಂಡ

0
IMG-20251106-WA0005.jpg

ಮಂಗಳೂರು: ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದಕ್ಕಾಗಿ ಆತನ ತಾಯಿಗೆ ಮಂಗಳೂರಿನ 4 ನೇ ಜೆ.ಎಂ.ಎಪ್.ಸಿ ನ್ಯಾಯಾಲಯ 26,000 ರೂ. ದಂಡ ವಿಧಿಸಿ ಆದೇಶಿದೆ.

ಅಕ್ಟೋಬರ್ 10ರಂದು ರಂದು ಬೈಕಂಪಾಡಿಯಲ್ಲಿ ಹತಿಜಮ್ಮ ಅವರು ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದಾರೆ. ಈ ಬಗ್ಗೆ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನವೆಂಬರ್ 5ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 4 ನೇ ಜೆ.ಎಂ.ಎಪ್.ಸಿ ನ್ಯಾಯಾಲಯ, ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದಕ್ಕೆ ವಾಹನದ ಮಾಲೀಕರಿಗೆ 26,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!