March 20, 2026

ಬೆಳ್ತಂಗಡಿ: ಅಕ್ರಮ ಗೋಸಾಗಾಟ ಆರೋಪ: ಆರೋಪಿಯ ಮನೆ ಜಪ್ತಿ ಮಾಡಿದ ಪೊಲೀಸರು

0
image_editor_output_image-505116672-1762345776010.jpg

ಬೆಳ್ತಂಗಡಿ: ಅಕ್ರಮ ಗೋಸಾಗಟದ ಆರೋಪದಲ್ಲಿ ಆರೋಪಿಯೊಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ.

ನವೆಂಬರ್ 2 ರಂದು ಧರ್ಮಸ್ಥಳ ಪೊಲೀಸರು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್‌ ಯಾನೆ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು.

ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಝೊಹಾರ ಸೇರಿ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ5,12 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ 11,(1)(D) ಪ್ರಾಣಿ ಹಿಂಸೆ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

error: Content is protected !!