February 1, 2026

ಮಿರ್ಜಾಪುರ: ರೈಲು ಹಳಿ ದಾಟುವ ವೇಳೆ ರೈಲು ಢಿಕ್ಕಿ: 6 ಮಹಿಳೆಯರು ಸಾವು

0
image_editor_output_image-1934556-1762345002582.jpg

ಉತ್ತರಪ್ರದೇಶ: ರೈಲ್ವೆ ಹಳಿ ದಾಟುವ ವೇಳೆ ಮತ್ತೊಂದು ರೈಲು ಡಿಕ್ಕಿಯಾಗಿ ಆರು ಮಂದಿ ಮಹಿಳೆಯರು ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರ ಬೆಳಿಗ್ಗೆ 9.30 ರ ಸುಮಾರಿಗೆ ಚೋಪನ್-ಪ್ರಯಾಗರಾಜ್ ಪ್ಯಾಸೆಂಜರ್ ರೈಲು ಚುನಾರ್ ರೈಲು ನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ. ಮಹಿಳೆಯರು ಪ್ಯಾಸೆಂಜರ್ ರೈಲಿನ ಇನ್ನೊಂದು ಬದಿಯಿಂದ ಇಳಿದು, ರೈಲ್ವೆ ಹಳಿ ಮೇಲೆ ನಿಂತಿದ್ದಾರೆ.

ಈ ವೇಳೆ ಅದೇ ಹಳಿ ಮೇಲೆ ಬರುತ್ತಿದ್ದ ಮತ್ತೊಂದು ರೈಲು ಮಹಿಳೆಯ ಮೇಲೆ ಹರಿದಿದೆ. ಮೃತರನ್ನು ಮಿರ್ಜಾಪುರ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದರು.

Leave a Reply

Your email address will not be published. Required fields are marked *

error: Content is protected !!