February 1, 2026

ಧರ್ಮಸ್ಥಳ ಪ್ರಕರಣ: ಎಸ್ಐಟಿ ವಿಚಾರಣೆಗೆ ಹಾಜರಾಗದ ತಿಮರೋಡಿ, ಮಟ್ಟಣ್ಣವರ್, ಜಯಂತ್, ವಿಠಲಗೌಡ

0
image_editor_output_image1252870430-1761633234509.jpg

ಬೆಳ್ತಂಗಡಿ: ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡದ ಎದುರು ಇಂದು ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಹಾಗೂ ವಿಠಲಗೌಡ ಅವರಿಗೆ 10:30 ಕ್ಕೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಮಧ್ಯಾಹ್ನವಾದರೂ ಯಾರೂ ವಿಚಾರಣೆಗೆ ಹಾಜರಾಗಿಲ್ಲ.

ಮಧ್ಯಾಹ್ನ 2 ಗಂಟೆಯವರೆಗೆ ಡೆಡ್ ಲೈನ್ ಇದ್ದು, ವಿಚಾರಣೆಗೆ ಗೈರಾಗಿದ್ದಲ್ಲಿ ಬಂಧಿಸುವ ಎಚ್ಚರಿಕೆ ಬಗ್ಗೆಯೂ ನೋಟಿಸ್ ನಲ್ಲಿ ತಿಳಿಸಲಾಗಿದೆ. ಇನ್ನು ಸುಜಾತಾ ಭಟ್ ಅವರಿಗೂ ನೋಟಿಸ್ ನೀಡಲಾಗಿತ್ತು, ಅವರು ಬೆಳಗ್ಗೆ 5 ಗಂಟೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಎಸ್ ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಕೂಡಾ ಬೆಳ್ತಂಗಡಿಯ ಎಸ್ ಐಟಿ ಕಚೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಮಾತ್ರ ತಲೆಮರೆಸಿಕೊಂಡಿದ್ದು, ಎಲ್ಲಿದ್ದಾರೆ ಎಂಬ ವಿಷಯ ಇನ್ನೂ ನಿಗೂಢವಾಗಿದೆ ಆದರೆ ಗಿರೀಶ್ ಮಟ್ಟಣ್ಣವರ್ , ಜಯಂತ್ ಟಿ, ಹಾಗೂ ವಿಠಲ ಗೌಡ ಮಾತ್ರ ಬರುತ್ತಾರಾ ಅನ್ನೋದು ಇನ್ನೂ ನಿಗೂಢವಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!