February 1, 2026

ಡಾ. ನುಶ್ರತ್‌ಗೆ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ

0
IMG-20251027-WA0009.jpg

ಉಪ್ಪಿನಂಗಡಿ: ಸರಳಿಕಟ್ಟೆ ಎಂಬ ಸಣ್ಣ ಗ್ರಾಮೀಣ ಪ್ರದೇಶ ದಿಂದ ಬೆಳೆದು ಬಂದಿರುವ ಡಾ. ನುಶ್ರತ್, ರವರು ಎಂ.ಕಾಂ., ಬಿ.ಎಡ್., ಪಿಜಿಡಿಎಚ್‌ಆರ್‌ಎಂ ವ್ಯಾಸಂಗ ಪೂರ್ತಿಗೊಳಿಸಿ ಇದೀಗ ಮಹತ್ತರ ಮೈಲಿಗಲ್ಲು ದಾಟಿದ್ದಾರೆ.

ಪ್ರತಿಷ್ಠಿತ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಪಾಂಡೇಶ್ವರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್‌ನಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿ. ಎಚ್ ಡಿ) ಪದವಿಯನ್ನು ಇವರಿಗೆ ಪ್ರದಾನ ಮಾಡಲಾಗಿದೆ. “ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಸರ್ಕಾರಿ ಶೈಕ್ಷಣಿಕ ಯೋಜನೆಗಳ ಬಗ್ಗೆ ಜಾಗೃತಿ ಮತ್ತು ಭಾಗವಹಿಸುವಿಕೆಯ ಮಟ್ಟವು ಸಬಲೀಕರಣವನ್ನು ಹೆಚ್ಚಿಸುವಲ್ಲಿ” ಎಂಬ ಕ್ಲಿಷ್ಟತೆಯ ವಿಷಯದ ಕುರಿತು ಅವರು ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟಾರೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಶೋಧನೆಯನ್ನು ಡಾ. ನಿಯಾಜ್ ಪಾನಕಜೆ ಮತ್ತು ಡಾ. ಶೈಲಶ್ರೀ ವಿ.ಟಿ. ಅವರ ಮಾರ್ಗದರ್ಶನದಲ್ಲಿ ನಡೆಸಿದ್ದಾರೆ.

ಡಾ. ನುಶ್ರತ್ ಅವರು ಉಸ್ಮಾನ್ ಹಾಜಿ ಸರಳಿಕಟ್ಟೆ ಮತ್ತು ಆಯಿಷಾ ಅವರ ಪುತ್ರಿ ಮತ್ತು ಶಕೀಲ್ ಅಹಮದ್ ಅವರ ಪತ್ನಿಯಾಗಿದ್ದಾರೆ. ತಮ್ಮ ಈ ಶೈಕ್ಷಣಿಕ ಸಾಧನೆಯ ಬಗ್ಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ, ಡಾ. ನುಶ್ರತ್ ಹೇಳಿದರು, “ನನ್ನ ಈ ಸಾಧನೆಯ ಹಿಂದೆ ನನ್ನ ಗುರುಗಳ ನಿರಂತರ ಮಾರ್ಗದರ್ಶನ, ಕುಟುಂಬದ ಸದಸ್ಯರ ಪ್ರೋತ್ಸಾಹ, ಸ್ನೇಹಿತರ ಬೆಂಬಲ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸರ್ವಶಕ್ತನ ಕೃಪೆಯಿದೆ. ಈ ಯಶಸ್ಸು ನನ್ನ ಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ”.

ಪ್ರಸ್ತುತ, ಡಾ. ನುಶ್ರತ್ ಅವರು ಭಾರಕ ಇಂಟರ್‌ನ್ಯಾಷನಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಉತ್ಸಾಹ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಸಮರ್ಪಿತರಾಗಿರುವ ಅವರು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ ಬರುತ್ತಾ ಎಲ್ಲರಿಗೂ ಪ್ರೇರಣೆ ನೀಡುವ ವ್ಯಕ್ತಿಯಾಗಿದ್ದಾರೆ. ಸರಳಿಕಟ್ಟೆಯಂತಹ ಗ್ರಾಮೀಣ ಪ್ರದೇಶದಿಂದ ಬಂದು ಇಂತಹ ಉನ್ನತ ಶೈಕ್ಷಣಿಕ ಸಾಧನೆಯನ್ನು ಮಾಡಿದ ಅವರ ಯಾತ್ರೆ, ಮಹಿಳಾ ಸಬಲೀಕರಣಕ್ಕೆ ಒಂದು ಸ್ಫೂರ್ತಿದಾಯಕ ಉದಾಹರಣೆಯಾಗಿದೆ.

ಡಾ. ನುಶ್ರತ್ ಅವರ ಈ ಸಾಧನೆಯು ಕೇವಲ ಅವರ ವೈಯಕ್ತಿಕ ಯಶಸ್ಸಿನ ಸಂಕೇತವಷ್ಟೇ ಅಲ್ಲ, ಗ್ರಾಮೀಣ ಭಾಗದಿಂದ ಬಂದಿರುವ ಯುವತಿಯರಿಗೆ ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಪ್ರೇರಣೆಯಾಗಿದೆ. ಅವರ ಈ ಯಶಸ್ಸು ಸರಳಿಕಟ್ಟೆ ಗ್ರಾಮದ ಜನರಿಗೆ ಹೆಮ್ಮೆಯ ಕ್ಷಣವಾಗಿದ್ದು, ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಗೆ ಒಂದು ಮಾದರಿಯಾಗಿದೆ. ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾ, ಡಾ. ನುಶ್ರತ್, “ನಾನು ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಬಯಸುತ್ತೇನೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಸಬಲೀಕರಣದ ದಾರಿಯನ್ನು ತೋರಿಸಲು ನನ್ನ ಸಂಶೋಧನೆಯನ್ನು ಮುಂದುವರೆಸಲು ಇಚ್ಛಿಸುತ್ತೇನೆ,” ಎಂದು ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.

ಡಾ. ನುಶ್ರತ್ ಅವರ ಈ ಸಾಧನೆಗೆ ಶ್ರೀನಿವಾಸ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಶಿಕ್ಷಕರು, ಗ್ರಾಮದ ನಿವಾಸಿಗಳು ಮತ್ತು ಕುಟುಂಬ ಸದಸ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಈ ಯಾತ್ರೆಯು ಶಿಕ್ಷಣದ ಶಕ್ತಿಯನ್ನು ಪ್ರದರ್ಶಿಸುವ ಜೊತೆಗೆ, ಗ್ರಾಮೀಣ ಯುವತಿಯರಿಗೆ ತಮ್ಮ ಕನಸುಗಳನ್ನು ಈಡೇರಿಸಲು ಒಂದು ದಾರಿದೀಪವಾಗಿದೆ.

Leave a Reply

Your email address will not be published. Required fields are marked *

error: Content is protected !!