September 21, 2026

ಮಂಗಳೂರು: 3 ಫ್ಲಾಟ್ ಗಳಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ, ಮೊಬೈಲ್ ಕಳವು: ಸೊತ್ತುಗಳ ಸಹಿತ ಇಬ್ಬರು ಆರೋಪಿಗಳ ಬಂಧನ

0
image_editor_output_image-406359002-1761047864878.jpg

ಮಂಗಳೂರು: ನಗರದ ಅಪಾರ್ಟ್ ಮೆಂಟ್ ನ 3 ಫ್ಲಾಟ್ ಗಳಲ್ಲಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಣ, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್ ಕಳವು ಮಾಡಿರುವ ಕುರಿತು ಅ.20ರ ಸೋಮವಾರ ದೂರು ದಾಖಲಾಗಿತ್ತು.

ಪೊಲೀಸರ ಶೀಘ್ರ ಕಾರ್ಯಾಚರಣೆಯಿಂದ ಕಳವು ಮಾಡಿದ ಇಬ್ಬರು ಆರೋಪಿಗಳನ್ನು 20 ಗಂಟೆಯೊಳಗೆ ಬಂಧಿಸಿ ಚಿನ್ನಾಭರಣ, ನಗದು ಹಾಗೂ 3000 Dirham ಗಳ ಜಪ್ತಿ ಮಾಡಲಾಗಿದೆ ಎಂದು ಆ.21ರ ಮಂಗಳವಾರ ವರದಿಯಾಗಿದೆ.

 

ಅಸ್ಸಾಂ ರಾಜ್ಯದ ಮೆಹೆರ್ ಪುರ್ ಅಂಚೆ ಕಾಚಾರ್‌ ಜಿಲ್ಲೆಯ ಅಭಿಜಿತ್ ದಾಸ್ (24) ಹಾಗೂ ದೇಬಾ ದಾಸ್ (21) ಬಂಧಿತರು.

ಆರೋಪಿಗಳು ಅಪಾರ್ಟ್ ಮೆಂಟ್ ನಲ್ಲಿರುವ 3 ಫ್ಲಾಟ್ ಗಳಿಗೆ ನುಗ್ಗಿ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು, 5000 ರೂ. ನಗದು ಹಣ, 3000 Dirham ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿರುವ ಬಗ್ಗೆ ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ಅ.20 ರಂದು ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!