February 2, 2026

ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐಇಇಇ ಡಿಸ್ಕವರ್ 2025’ ಸಮಾರೋಪ ಸಮಾರಂಭ

0
image_editor_output_image652565915-1760801359117

ಮಂಗಳೂರು: ವಿತರಿತ ಗಣನೆ, ವಿಎಲ್‌ಎಸ್‌ಐ, ಎಲೆಕ್ಟ್ರಿಕಲ್ ಸರ್ಕ್ಯೂಟ್ಸ್ ಮತ್ತು ರೋಬೋಟಿಕ್ಸ್ ವಿಷಯಾಧಾರಿತ 9ನೇ ಅಂತರಾಷ್ಟ್ರೀಯ ‘ಐಇಇಇ ಡಿಸ್ಕವರ್ 2025’ (IEEE DISCOVER 2025) ಸಮ್ಮೇಳನವು ನಡುಪದವು ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭವ್ಯವಾಗಿ ಸಮಾರೋಪಗೊಂಡಿತು. ಈ ಮೂರು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವು ದೇಶ–ವಿದೇಶಗಳ ಸಂಶೋಧಕರು, ಅಕಾಡೆಮಿಷ್ಯನರು ಮತ್ತು ಕೈಗಾರಿಕಾ ತಜ್ಞರನ್ನು ಒಟ್ಟುಗೂಡಿಸಿತು.

ಡಾ. ಎಸ್. ಡಿ. ಸುಧರ್ಶನ, ಕಾರ್ಯನಿರ್ವಾಹಕ ನಿರ್ದೇಶಕರು,ಸಿ-ಡ್ಯಾಕ್ (C-DAC), ಬೆಂಗಳೂರು, ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಭಾರತದ ಸೆಮಿಕಂಡಕ್ಟರ್ ಮತ್ತು ವಿಎಲ್‌ಎಸ್‌ಐ ಉದ್ಯಮದ ಬೆಳವಣಿಗೆ ಮತ್ತು ಭವಿಷ್ಯದ ಅವಕಾಶಗಳ ಕುರಿತು ವಿಶದವಾಗಿ ಮಾತನಾಡಿದರು. ಅವರು ಶೈಕ್ಷಣಿಕ–ಕೈಗಾರಿಕಾ ಸಹಯೋಗಗಳ ಅಗತ್ಯತೆಯನ್ನು ಹಿಗ್ಗಾಮುಗ್ಗವಾಗಿ ವಿವರಿಸಿದರು ಹಾಗೂ ದೇಶೀಯ ನವೀನ ಸಂಶೋಧನೆಗೆ ಪ್ರೋತ್ಸಾಹ ನೀಡುವಂತೆ ಕೋರಿದರು.

ಡಾ. ಸಮೀರ್ ಎಸ್. ಎಂ., ಪ್ರಾಧ್ಯಾಪಕರು, ಎನ್‌.ಐ.ಟಿ. ಕಾಳಿಕಟ್, ಸಮಾರೋಪ ಭಾಷಣ ನೀಡುತ್ತಾ, ಐಇಇಇ ಡಿಸ್ಕವರ್ 2025 ಆಯೋಜಕರ ಶಿಸ್ತಿನ, ಗುಣಮಟ್ಟದ ಸಂಶೋಧನಾ ವಿಮರ್ಶೆ ಹಾಗೂ ಸಮರ್ಪಕ ಆಯೋಜನೆಯನ್ನು ಮೆಚ್ಚಿದರು.

ಕಾರ್ಯಕ್ರಮಕ್ಕೆ ಪ್ರಧಾನಾಚಾರ್ಯರಾದ ಡಾ. ರಾಮಿಸ್ ಎಂ. ಕೆ. ಅಧ್ಯಕ್ಷತೆ ವಹಿಸಿ, ಪಿ.ಎ. ತಾಂತ್ರಿಕ ಮಹಾವಿದ್ಯಾಲಯವು ಜಾಗತಿಕ ಸಂಶೋಧನಾ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದರು.
ಡಾ. ಮೊಹಮ್ಮದ್ ಜಾಕಿರ್ ಸಮ್ಮೇಳನದ ವರದಿಯನ್ನು ಮಂಡಿಸಿದರು ಮತ್ತು ಡಾ. ಶರ್ಮಿಲಾ ಕುಮಾರಿ, ಆಯೋಜನಾ ಅಧ್ಯಕ್ಷೆ, ಕೃತಜ್ಞತೆಗಳು ಅರ್ಪಿಸಿದರು. ಡಾ. ಪಾಳಕ್ಷಪ್ಪ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಸ್ವಾಗತ ಭಾಷಣ ಮಾಡಿದರು.

ಸಮ್ಮೇಳನದ ವಿವಿಧ ವಿಷಯ ವಿಭಾಗಗಳಲ್ಲಿ ಅತ್ಯುತ್ತಮ ಪ್ರಬಂಧಗಳಿಗೆ ಬೆಸ್ಟ್ ಪೇಪರ್ ಅವಾರ್ಡ್ಗಳನ್ನು ಪ್ರದಾನಿಸಲಾಯಿತು. ಭಾಗವಹಿಸಿದ ಸಂಶೋಧಕರು ಹಾಗೂ ಅತಿಥಿಗಳು ಐಇಇಇ ತಂಡದ ಆತಿಥ್ಯ, ತಾಂತ್ರಿಕ ಸಮರ್ಪಣೆ ಮತ್ತು ಸೌಹಾರ್ದಯುತ ನಿರ್ವಹಣೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಪ್ರೊ. ಫಾತಿಮತ್ ರೈಹಾನಾ ಸುಸೂತ್ರವಾಗಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!