ಧರ್ಮಸ್ಥಳ ಪ್ರಕರಣ: 3 ದಿನದೊಳಗೆ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ
ಬೆಂಗಳೂರು: ಧರ್ಮಸ್ಥಳ ಅನಧಿಕೃತ ಶವ ಹೂತ ಪ್ರಕರಣ ಸೇರಿದಂತೆ ಧರ್ಮಸ್ಥಳದ ಅಸಹಜ ಸಾವುಗಳ ವಿಚಾರವಾಗಿ ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಸಹೋದರ ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬಸ್ಥರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೋಗಳನ್ನು 3 ದಿನದೊಳಗಾಗಿ ಡಿಲೀಟ್ ಮಾಡುವಂತೆ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಯೂಟ್ಯೂಬರ್ ಸಮೀರ್, ಗಿರೀಶ್ ಮಟ್ಟಣ್ಣವರ್, ಅಜಯ್ ಅಂಚನ್ (ಕುಡ್ಲ ರಾಂಪ್ ಪೇಜ್) ಮತ್ತು ಅಣ್ಣಾಬಾಂಡ್ ಶ್ರೀನಾಥ್ ಎಂಬುವವರು ತಮ್ಮ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ, “ನಿಮಗೆ ಏಕೆ 10 ಕೋಟಿ ರೂಪಾಯಿ ಮಾನನಷ್ಟ ವಿಧಿಸಬಾರದು?” ಎಂಬುದಕ್ಕೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.




