March 20, 2026

ಬೆಳ್ತಂಗಡಿ: ಜಯಂತ್ ಟಿ. ವಿರುದ್ಧ ಸುಮೋಟೋ ಪ್ರಕರಣ ದಾಖಲು

0
image_editor_output_image-710261216-1760508750419.jpg

ಬೆಳ್ತಂಗಡಿ: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರದಲ್ಲಿ ಇದೊಂದು ಷಡ್ಯಂತ್ರ ಎಂದು ಸುಳ್ಳು ಸುದ್ದಿಯನ್ನು ಯುಟ್ಯೂಬ್ ನಲ್ಲಿ ಪ್ರಸಾರ ಮಾಡಿದ ಆರೋಪದಲ್ಲಿ ಸೌಜನ್ಯಪರ ಹೋರಾಟಗಾರ ಜಯಂತ್ ಟಿ ವಿರುದ್ದ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಜಯಂತ್ ಟಿ ರವರು ಯೂಟ್ಯೂಬ್ ನಲ್ಲಿ ಸತ್ಯಾಸತ್ಯತೆಯನ್ನು ತಿಳಿದಿದ್ದರು ಸಹ ಅಪೂರ್ಣವಾದ ಮಾಹಿತಿಯೊಂದಿಗೆ ಪೊಲೀಸ್ ಉಪಾಧಿಕ್ಷಕರು ಬಂಟ್ವಾಳ ರವರು ನಿಯಮನುಸಾರ ಕಾನೂನಾತ್ಮಕವಾಗಿ ಮಹೇಶ್ ಶೆಟ್ಟಿ ತಿಮರೋಡಿಯವರ ವಿರುದ್ಧ ಮಾನ್ಯ ಸಹಾಯಕ ಆಯುಕ್ತರು ಪುತ್ತೂರು ರವರಿಗೆ ಗಡಿಪಾರು ಪ್ರಸ್ತಾವನೆಯನ್ನು ಸಲ್ಲಿಸಿರುವುದನ್ನು ಸೌಜನ್ಯ ಪರ ಹೋರಾಟಕ್ಕೆ ತೊಂದರೆ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸಿ ಸಂಬಂಧ ಕಲ್ಪಿಸಿ, ಇದೊಂದು ಷಡ್ಯಂತ್ರ ಎಂದು ಯೂಟ್ಯೂಬ್ನಲ್ಲಿ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದ್ದು ಈ ಬಗ್ಗೆ ದಿನಾಂಕ 14/10/2025 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 118/2025 ಕಲಂ: 353(1)(b) ಬಿಎನ್ ಎಸ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!