ವಿಟ್ಲ: ಪ್ರವಾಸಿ ಕೂಟ ವತಿಯಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಸಮಸ್ಯೆ ಬಗೆಹರಿಸುವಂತೆ ಮನವಿ
ವಿಟ್ಲ: ಪ್ರವಾಸಿ ಕೂಟ ವಿಟ್ಲ ಇದರ ವತಿಯಿಂದ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆ ಇತ್ಯರ್ಥ ಮಾಡುವಂತೆ ಆಗ್ರಹಿಸಿ ಶಾಸಕ ಅಶೋಕ್ ರೈ ಗೆ ಮನವಿ ಸಲ್ಲಿಸಲಾಯಿತು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರನ್ನು ನೇಮಿಸುವುದು ಹಾಗು ಆಸ್ಪತ್ರೆಯನ್ನು ಹೆಚ್ಚಿನ ಸೌಲಭ್ಯದೊಂದಿಗೆ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರವಾಸಿ ಕೂಟ ವಿಟ್ಲ(ರಿ) ಅಧ್ಯಕ್ಷರಾದ ಮುಹಮ್ಮದ್ ಮಸೂದ್ ಬೊಬ್ಬೆಕ್ಕೇರಿ ಯವರ ನೇತೃತ್ವದ ನಿಯೋಗವು ಶಾಸಕರಾದ ಸನ್ಮಾನ್ಯ ಅಶೋಕ್ ಕುಮಾರ್ ರೈ ಯವರನ್ನು ಪುತ್ತೂರಿನ ಶಾಸಕರ ಕಛೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.
ಪ್ರಸ್ತುತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿದ್ದು ಖಾಯಂ ವೈದ್ಯರ ಹಾಗು ಔಷದಿ ಸಾಮಗ್ರಿಗಳ ಕೊರತೆ, ಪ್ರಸೂತಿ ತಜ್ಞರು ಮತ್ತು ಗರ್ಭಿಣಿಯರಿಗೆ ಅತ್ಯಾದುನಿಕ ಗುಣಮಟ್ಟದ ಸ್ಕ್ಯಾನಿಂಗ್ ಸೆಂಟರ್ ನ ಅಭಾವ ಹಾಗು ಖಾಯಂ ಸಿಬ್ಬಂದಿಗಳ ಅಭಾವ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯ ಬಗ್ಗೆ ಶಾಸಕರ ಗಮನಕ್ಕೆ ತರಲಾಯಿತು. ಗಡಿನಾಡಿನ ಮತ್ತು ಗ್ರಾಮೀಣ ಪ್ರದೇಶದ ಜನಸಾಮಾನ್ಯರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನೇ ಆಶ್ರಯಿಸಿರುವುದರಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಈ ಬಗ್ಗೆ ಸಂಭಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ನಿಯೋಗದಲ್ಲಿ ಪ್ರವಾಸಿ ಕೂಟ ವಿಟ್ಲ(ರಿ) ಸ್ಥಾಪಕ ಹೈದರಾಲಿ ವಿಟ್ಲ, ಕತಾರ್ ಘಟಕದ ಉಪಾಧ್ಯಕ್ಷ ಇಫ್ತಿಕಾರ್ ವಿಟ್ಲ, ಅಬುಧಾಬಿ ಘಟಕದ ಕಾರ್ಯದರ್ಶಿ ಝಕರಿಯಾ ವಿಟ್ಲ, ಮಾಧ್ಯಮ ಸಂಯೋಜಕ ಸಫ್ವಾನ್ ಕೋಡಪದವು, ಸದಸ್ಯರಾದ ಸಮೀರ್ ವಿಟ್ಲ, ಅಝ್ಮಲ್ ವಿಟ್ಲ, ಝ್ಹಾಹಿದ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.




