March 20, 2026

ಬೆಳ್ತಂಗಡಿ: ಪ್ರಯಾಣಿಕ, ಕೆಎಸ್ ಆರ್ಟಿಸಿ ಮಹಿಳಾ ಕಂಡಕ್ಟರ್ ನಡುವೆ ಗಲಾಟೆ

0
image_editor_output_image-2115461340-1760159779181.jpg

ಬೆಳ್ತಂಗಡಿ: ಕೆಎಸ್ಆರ್ ಟಿಸಿ ಬಸ್ ನ ಲೆಡಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಟಿಕೆಟ್ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು. ಈ ವೇಳೆ ಪ್ರಯಾಣಿಕನ ಮೇಲೆ ಬಸ್ ನಲ್ಲೇ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ಅಕ್ಟೋಬರ್ 10ರಂದು ನಡೆದಿದೆ.

ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಉಜಿರೆಯಲ್ಲಿ ಹತ್ತಿದ ಪ್ರಯಾಣಿಕ ಟಿಕೆಟ್ ಹಣ ಕೊಟ್ಟಿದ್ದೇನೆ ಅಂತ ವಾದಿಸುತ್ತಿದ್ದರೆ, ಲೇಡಿ ಕಂಡಕ್ಟರ್ ಹಣ ಕೊಟ್ಟಿಲ್ಲ ಅಂತ ವಾದಿಸುತ್ತಿದ್ದರು.‌ ಬಸ್ ನಲ್ಲಿದ್ದ ಪ್ರಯಾಣಿಕರು ಆತ ಹಣ ಕೊಟ್ಟಿದ್ದಾನೆ ಅಂತ ಸ್ಥಳದಲ್ಲಿ ತಿಳಿಸಿದರು.

ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾದರು. ಈ ವೇಳೆ ಬೆಳ್ತಂಗಡಿ ಪೊಲೀಸರು ಮದ್ಯ ಪ್ರವೇಶಿಸಿ, ಕಂಡಕ್ಟರ್ ಮತ್ತು ಪ್ರಯಾಣಿಕನನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಬೆಳ್ತಂಗಡಿ ಟಿಸಿ ಬದಲಿ ವ್ಯವಸ್ಥೆ ಮಾಡಿದರು. ಬೆಳ್ತಂಗಡಿಯಲ್ಲೇ ನಿಂತ ಬಸ್ ಗೆ ಬದಲಿ ವ್ಯವಸ್ಥೆ ಮಾಡಿ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!