ಮಂಗಳೂರು: ಮೀನು ಹಿಡಿಯಲು ಹೋದ ವ್ಯಕ್ತಿ ಸಮುದ್ರಪಾಲು
ಮಂಗಳೂರು : ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಸಮುದ್ರ ಪಾಲಾದ ಘಟನೆ ಮಂಗಳೂರಿನ ಅಳಿವೆ ಬಾಗಿಲಿನಲ್ಲಿ ಬುಧವಾರ ಸಂಜೆ ನಡೆದಿದೆ.
ಮನೋಹರ್ ಪುತ್ರನ್ (53) ಮೃತ ದುರ್ದೈವಿಯಾಗಿದ್ದಾರೆ. ಸಾಯಂಕಾಲ ಸರಿ ಸುಮಾರು 6:30 ಸಮಯ ತೋಟ ಬೆಂಗ್ರೆ ಅಳಿವೆ ಬಾಗಿಲು ಬಳಿ ನದಿಯಲ್ಲಿ ಬಲೆ ಹಾಕಿ ಮೀನು ಹಿಡಿಯಲು ಪುತ್ರನ್ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭ ಆಕಸ್ಮಿಕವಾಗಿ ಸಮುದ್ರ ಪಾಲಾಗಿ ಕಣ್ಮರೆಯಾಗಿದ್ದರು.
ಮಾಹಿತಿ ಪಡೆದ ಪಣಂಬೂರು ಠಾಣಾ ಪೋಲಿಸರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಮೀನುಗಾರರ ಸಹಾಯದಿಂದ ಹುಡುಕಾಟ ಆರಂಭಿಸಿ ಸುಮಾರು ರಾತ್ರಿ 9:30 ಸಮಯ ಮೃತ ದೇಹವನ್ನು ಮೇಲಕ್ಕೆತ್ತಲಾಯಿತು. ಪಣಂಬೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಾಲಾಗಿದೆ.




