ಬೀಚ್‍ನಲ್ಲಿ ಮುಳುಗಿ ಒಂದೇ ಕುಟುಂಬದ 7 ಮಂದಿ ಸಾವು
ಬೆಳಗಾವಿ: ಮಹಾರಾಷ್ಟ್ರದ ಶಿರೋಡಾ ಬೀಚ್‍ಗೆ ಪ್ರವಾಸಕ್ಕೆ ಹೋಗಿದ್ದ ಖಾನಾಪೂರದ ಲೋಂಡಾದ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ್ದಾರೆ.
ಮೃತರನ್ನು ಇರ್ಫಾನ್ (37), ಫರೀನ್ (34), ಇಬಾದ (13), ಇಕ್ವಾನ್ (15), ಧಾರವಾಡ ಮೂಲದ ಅತ್ತಾರ (16), ಮಹಾರಾಷ್ಟ್ರದ ಫರಾನ್ (34), ಜಾಕೀರ್ (13) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಇಜನಾ ಕಿತ್ತೂರು (10), ಇಮ್ರಾನ್ (42), ಜಬೀನ್ (38) ಸೇಫ್ ಇಸ್ರಾ (16) ಅಪಾಯದಿಂದ ಪಾರಾಗಿದ್ದಾರೆ.ಕಳೆದ ಎರಡು ದಿನಗಳ ಹಿಂದೆ 11 ಜನ ಸೇರಿ ಪ್ರವಾಸಕ್ಕೆಂದು ಮಹಾರಾಷ್ಟ್ರಕ್ಕೆ ಹೋಗಿದ್ದರು. ಆಗ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದಾಗ ಅಲೆಗಳಿಗೆ ಸಿಲುಕಿ 7 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಬಚಾವ್ ಆಗಿದ್ದಾರೆ. ಇದರಿಂದ ಲೋಂಡಾ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.





