March 4, 2026

ಮಂಜೇಶ್ವರ: ಮೈದಾನದಲ್ಲಿ ಕುಸಿದು ಬಿದ್ದು ಮೃತ್ಯು

0
image_editor_output_image-1418659025-1758781789960.jpg

ಮಂಜೇಶ್ವರ: ಶಾಲಾ ಆಟೋಟ ಸ್ಪರ್ಧೆಯ ವೇಳೆ ನಾಲ್ಕನೇ ತರಗತಿಯ ವಿದ್ಯಾರ್ಥಿಯೊಬ್ಬ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉಪ್ಪಳದ ಕುಕ್ಕಾರು ಶಾಲೆಯಲ್ಲಿ ನಡೆದಿದೆ.

ಮಂಗಲ್ಪಾಡಿ ಶಾಲೆಯೊಂದರ ವಿದ್ಯಾರ್ಥಿ 10 ವರ್ಷದ ಹಸನ್ ರಾಝಾ ಮೃ*ತಪಟ್ಟ ಬಾಲಕ. ಆಟೋಟ ಸ್ಪರ್ಧೆ ಮಧ್ಯೆ ಬಾಲಕ ಕುಸಿದು ಬಿದ್ದಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಬದುಕುಳಿಯಲಿಲ್ಲ ಎನ್ನಲಾಗಿದೆ.

ಹಸನ್ ರಾಝಾ ಮೂಲತಃ ಉತ್ತರ ಪ್ರದೇಶದ ಮುರ್ಷಿದಾಬಾದ್ ನಿವಾಸಿ ಇಲ್ಪಾಫಲಿ ಎಂಬವರ ಪುತ್ರ. ಉದ್ಯೋಗ ನಿಮಿತ್ತ ವಲಸೆ ಬಂದಿರುವ ಅವರ ಕುಟುಂಬ ಉಪ್ಪಳ ನಗರ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!