ಸುಳ್ಯ: ಅಡಿಕೆ ಕಳವು,ಆರೋಪಿ ಅರೆಸ್ಟ್
ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿರುವ ದಿನಸಿ ಅಂಗಡಿ ಮಾಲಕರಾದ ಮಹಮ್ಮದ್ ರಫೀಕ್ ಎಸ್ ಡಿ ರವರ ಬಾಬ್ತು ಅಡಿಕೆ ಸಂಗ್ರಹಿಸುವ ಗೋಡಾನ್‌ನಿಂದ ಅಡಿಕೆಯನ್ನು ಕದ್ದ ಇಬ್ಬರು ಕಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ,
ಸೆಪ್ಟೆಂಬರ್ 12 ರಂದು ರಾತ್ರಿ ವೇಳೆ ಗೋಡೌನ್ ನಲ್ಲಿದ್ದ 1 ಕ್ವಿಂಟಲ್ ಸುಲಿದ ಅಡಿಕೆಯನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಈ ಕುರಿತಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾದ ಕ್ರಮಾಂಕ:103/2025 ಕಲಂ 331(4) 305(ಎ) 3(5) ಬಿಎನ್‌ಎಸ್-2023 ರಂತೆ ಪ್ರಕರಣ ದಾಖಾಲಾಗಿತ್ತು.
ಬಂಧಿತ ಆರೋಪಿಗಳನ್ನು ಸುಪ್ರಿತ್ ಕೆ(22) ಹಾಗೂ ಮಹಮ್ಮದ್ ಸಿನಾನ್(21ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ದಿನಾಂಕ:19.09.2025ರಂದು ಸುಳ್ಯ ತಾಲೂಕು ಮಂಡೆಕೋಲು ಗ್ರಾಮ ಮುರೂರು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದು ಆರೋಪಿಗಳು ಕಳುವು ಮಾಡಿದ 1 ಕ್ವಿಂಟಲ್ ಸುಲಿದ ಅಡಿಕೆ ಸಾಗಾಟ ಮಾಡಲು ಉಪಯೋಗಿಸಿರುವ ಕೆಎ 21 ಸಿ 5862ನೇ ನಂಬ್ರದ ಆಟೋ ರಿಕ್ಷಾವನ್ನು ಸ್ವಾದೀನಪಡಿಸಿಕೊಂಡು ಆರೊಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




