March 13, 2026

ಕುಂದಾಪುರ: ಉದ್ಯಮಿ ಉದಯ ಚಾತ್ರ ಆತ್ಮಹತ್ಯೆ

0
image_editor_output_image1367522275-1758183179878.jpg

ಕುಂದಾಪುರ: ಸಿದ್ದಾಪುರ ಚಾತ್ರ ಎಂಟರ್‌ಪ್ರೈಸಸ್‌ ಮಾಲಕ ಉದಯ ಚಾತ್ರ (43) ಸೆಪ್ಟೆಂಬರ್ 17ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳಗ್ಗೆ ಕಮಲಶಿಲೆಯಲ್ಲಿ ನಡೆದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗೆ ತನ್ನ ತಂದೆ, ತಾಯಿ ಹಾಗೂ ಪತ್ನಿಯ ಜತೆಯಲ್ಲಿ ಆಗಮಿಸಿದ್ದರು. ಬಳಿಕ ಅವರನ್ನು ಮಹಾಸಭೆಯಲ್ಲಿ ಬಿಟ್ಟು ಸಿದ್ದಾಪುರದಲ್ಲಿರುವ ಚಾತ್ರ ಎಂಟರ್‌ಪ್ರೈಸಸ್‌ ಹೋಗುವುದಾಗಿ ಹೇಳಿ ಹೊರಟಿದ್ದರು.

ಆದರೆ ಕಮಲಶಿಲೆಯಿಂದ ತನ್ನ ಅಂಗಡಿಗೆ ಹೋಗದೆ ನೇರವಾಗಿ ಮನೆಗೆ ಹೋಗಿದ್ದರು. ಮಹಡಿ ಮೇಲಿನ ಕೋಣೆಗೆ ತೆರಳಿ ಫ್ಯಾನಿನ ಕೊಕ್ಕೆಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದಯ ಚಾತ್ರ ಅವರು ಮೃದು ಭಾಷಿಗರಾಗಿದ್ದು, ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರು. ಚಾತ್ರ ಎಂಟರ್‌ಪ್ರೈಸಸ್‌ ಚೆನ್ನಾಗಿ ವ್ಯವಹಾರ ನಡೆಯುತ್ತಿತ್ತು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿತ್ತು.

Leave a Reply

Your email address will not be published. Required fields are marked *

error: Content is protected !!