March 13, 2026

ಮಂಗಳೂರು: ಪೂಂಜಾ ಇಂಟರ್ ನ್ಯಾಶನಲ್ ಹೊಟೇಲ್ ಮಾಲಕ ಪ್ರಭಾಕರ ಪೂಂಜಾ ನಿಧನ

0
image_editor_output_image-648333371-1758183265465.jpg

ಮಂಗಳೂರು: ಮಂಗಳೂರಿನ ಹೆಸರಾಂತ ಹೊಟೇಲ್ ಹಂಪನಕಟ್ಟೆಯ ಪೂಂಜಾ ಇಂಟರ್ನ್ಯಾಶನಲ್ ಇದರ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ(72) ಅಲ್ಪಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಮಂಗಳೂರಿನಲ್ಲಿ ಕ್ಯಾಂಪಿಂಗ್ ಸ್ಥಳಗಳು

40 ವರ್ಷಗಳ ಹಿಂದೆ ಮುಂಬೈನಲ್ಲಿದ್ದ ಪ್ರಭಾಕರ ಪೂಂಜಾ ಅವರಿಗೆ ಅಂಡರ್ ವರ್ಲ್ಡ್ ಸಂಪರ್ಕ ಇತ್ತು ಎಂದು ಹೇಳಲಾಗುತ್ತಿತ್ತು, ಬಳಿಕ 1986ರಲ್ಲಿ ಮಂಗಳೂರಿಗೆ ಬಂದು ಪೂಂಜಾ ಇಂಟರ್ ನ್ಯಾಶನಲ್ ಹೊಟೇಲ್ ನಿರ್ಮಾಣ ಮಾಡಿದ್ದರು. ಆ ವೇಳೆ ಮಂಗಳೂರಿನಲ್ಲಿ ಮೋತಿ ಮಹಲ್ ಬಿಟ್ಟರೆ ಅದ್ದೂರಿ ಮತ್ತು ಬೃಹತ್ ಹೊಟೇಲ್ ಎಂದು ಪೂಂಜಾ ಹೊಟೇಲ್ ಹೆಸರು ಮಾಡಿತ್ತು.

ಆರಂಭದಲ್ಲಿ ಮುಂಬೈ ನಂಟು ಇದ್ದರೂ ನಂತರ ಅಲ್ಲಿನ ನಂಟನ್ನು ಬಿಟ್ಟು ಮಂಗಳೂರಿನಲ್ಲೇ ಇದ್ದರು. ಮಂಗಳೂರಿಗೆ ಬಂದ ಬಳಿಕವೇ ಅವರಿಗೆ ಮದುವೆಯಾಗಿತ್ತು. ಅವರ ಮಕ್ಕಳು ಈಗ ಹೊಟೇಲ್ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!