ತುಂಬೆ ಕಾಲೇಜಿನಲ್ಲಿ ಮಾದಕ ವ್ಯಸನ ಮತ್ತು ಸೈಬರ್ ಅಪರಾಧಗಳ ಅರಿವು ಕಾರ್ಯಕ್ರಮ
ಹದಿನೆಂಟು ವರ್ಷದ ಒಳಗಿನ ಅಪ್ರಾಪ್ತರು ಯಾವುದೇ ರೀತಿಯ ಮಾದಕ ದ್ರವ್ಯ ಸೇವನೆ,ಸೈಬರ್ ಅಪರಾಧಗಳಲ್ಲಿ ತೊಡಗುವುದು ಒಳ್ಳೆಯದಲ್ಲ.ಇದರಿಂದ ಮುಂದಕ್ಕೆ ಸ್ವಾಸ್ಥ್ಯ ಸಮಾಜವನ್ನು ಕಾಣಲು ಸಾಧ್ಯವಿಲ್ಲ ಎಂಬುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ಮುಖ್ಯ ಮಂತ್ರಿ ಪದಕ ಪುರಸ್ಕೃತ ಪೋಲಿಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ ಹೇಳಿದರು.
ಅವರು ದ.ಕ.ಜಿಲ್ಲಾ ಪೋಲಿಸ್ ಇಲಾಖೆ,ಬಂಟ್ವಾಳ ಉಪ ವಿಭಾಗ ಮತ್ತು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯವರು ಜಂಟಿಯಾಗಿ ತುಂಬೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮಾದಕ ವ್ಯಸನ ಮತ್ತು ಸೈಬರ್ ಕ್ರೈಮ್ ನ ಮಾಹಿತಿ ನೀಡಿ ಮಾತನಾಡಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಂಟ್ವಾಳ ಗ್ರಾಮೀಣ ಆರಕ್ಷಕ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಟಿ ಅವರು ಅಪ್ರಾಪ್ತ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ವಾಹನ ಚಲಾಯಿಸುವುದು,ಹೆಲ್ಮೆಟ್ ಧರಿಸದಿರುವುದು,ಟ್ರಿಪಲ್ಸ್ ರೈಡಿಂಗ್ ಮಾಡುವುದು ಅಪರಾಧವಾಗುತ್ತದೆ.ಅಪೀಮು,ಕುಕೈನ್,ಗಾಂಜಾ ಮುಂತಾದ ವ್ಯಸನ-ವ್ವಹಾರಗಳಲ್ಲಿ ಭಾಗಿಯಾಗುವುದೂ ತಪ್ಪು. ಅಲ್ಲದೆ ಸೈಬರ್ ಅಪರಾಧ,ಪೋಕ್ಸೋ ಕಾಯಿದೆ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿದರು.
ಹೆಡ್ ಕಾನ್ಸ್ ಟೇಬಲ್ ಕೃಷ್ಣ ನಾಯ್ಕ್,ಕೀರ್ತನ್ ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್,ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್ ಕೆ ಉಪಸ್ಥಿತರಿದ್ದ ಸಮಾರಂಭದಲ್ಲಿ ಮೊದಲಿಗೆ ಪ್ರಾಂಶುಪಾಲ ವಿ.ಎಸ್.ಭಟ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ ಶೆಟ್ಟಿ ಅಳಿಕೆ ವಂದಿಸಿದರು.




