ವಿಟ್ಲ: ಜೆಸಿಐ ಸಪ್ತಾಹ-2025 ಸಮಾರೋಪ: ಸಾಧಕರಿಗೆ ಸನ್ಮಾನ
ವಿಟ್ಲ ಜೆಸಿಐ ಘಟಕದ ಸಪ್ತಾಹ. 2025 ಇದರ ಸಮಾರೋಪ ಗ್ರೇಟ್ ಡೇ ಸಂದರ್ಭದಲ್ಲಿ ತೆರೆಮರೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
ಅಳಿಕೆ ಶಾಲೆ ವಿದ್ಯಾರ್ಥಿ ಬಾಲ ಪ್ರತಿಭೆ ತೇಜಸ್, ಅಪದ್ಭಾಂದವರಾದ ಯೋಗೀಶ್ ಕಾಶಿಮಠ ಮತ್ತು ಪ್ರತಾಪ್ ಕಾಶಿಮಠ ಇವರನ್ನು ಸನ್ಮಾನಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಂಟ್ವಾಳ ಎಸ್ ವಿ ಎಸ್ ಟೆಂಪಲ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಗಂಗಾಧರ ಆಳ್ವ, ವಿವೇಕಾನಂದ ಕಾಲೇಜಿನ ಉಪನ್ಯಾಸಕ ರಾಜಾರಾಮ ವರ್ಮ ಮತ್ತು ವಿಟ್ಠಲ ಎಜುಕೇಶನ್ ಸೊಸೈಟಿ ಕೋಶಾಧಿಕಾರಿ ಬಾಬು ಕೊಪ್ಪಳ ಅತಿಥಿಗಳಾಗಿ ಭಾಗವಹಿಸಿದ್ದರು. ಜೆಸಿಐ ಘಟಕದ ಅಧ್ಯಕ್ಷೆ ಸೌಮ್ಯ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯದ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಶಾನ್ ಲೆನ್ವಿನ್ ಮಸ್ಕರೇನಸ್, ಸಂದೀಪ್, ಹೇಮಲತಾ ಜೈಕಿಶನ್, ಅಶ್ವಿನಿ ದಿನೇಶ್, ಜೆಸಿಐ ಪೂರ್ವಾಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.




