March 13, 2026

ಅಡ್ಯಾರ್ ನಲ್ಲಿ ಗೋ ಕಳ್ಳತನ ಆರೋಪ: ಮೂವರು ಆರೋಪಿಗಳ ಬಂಧನ

0
image_editor_output_image-278214608-1758176435875.jpg

ಮಂಗಳೂರು: ಮಂಗಳೂರಿನ ಅಡ್ಯಾರ್ ನಲ್ಲಿ ಮನೆಯೊಂದರ ಅಂಗಳದಿಂದ ದನವನ್ನು ಕದ್ದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕಂಕನಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರಿನ ನಿವಾಸಿಗಳಾದ ಶಾಬಾಜ್ ಅಹಮ್ಮದ್ , ಮೊಹಮ್ಮದ್ ಸುಹಾನ್, ವಳಚ್ಚಿಲ್ ಖಾದರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ.ಮಂಗಳೂರಿನಲ್ಲಿ ಸ್ಥಳೀಯ ಆಹಾರ

ಶಾಬಾಜ್ ಕಣ್ಣೂರು ಮತ್ತು ಸುಹಾನ್ ವಳಚ್ಚಿಲ್ ದನ ಕಳ್ಳತನ ಮಾಡಿ, ವಳಚ್ಚಿಲ್ ಖಾದರ್ ನಿಗೆ ಮಾರಾಟ ಮಾಡಿದ್ದು, ಆತನು ಅದನ್ನು ಮಾಂಸ ಮಾಡಲು ಖರೀದಿಸಿದ್ದು, ದನವನ್ನು ರಕ್ಷಿಸಿ, ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಲಾಗಿರುತ್ತದೆ.

ಶಾಬಾಜ್ ಅಹ್ಮದ್ ಕಣ್ಣೂರು ಎಂಬಾತನ ವಿರುದ್ದ ಈಗಾಗಲೇ ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ಠಾಣೆಯಲ್ಲಿ ಒಂದು ಕೊಲೆ, ಎರಡು ಕೊಲೆ ಪ್ರಯತ್ನ ಮತ್ತು ಒಂದು ದೊಂಬಿ ಪ್ರಕರಣಗಳು ಮತ್ತು ಮೊಹಮ್ಮದ್ ಸುಹಾನ್, ಅರ್ಕುಳ ಎಂಬಾತನ ವಿರುದ್ದ ಉಳ್ಳಾಲ ಠಾಣೆಯಲ್ಲಿ ಒಂದು ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣ ಹಾಗೂ ವಳಚ್ಚಿಲ್ ಖಾದರ್ ಮೊಹಮ್ಮದ್ @ ಕೋಳಿ ಮಹಮದ್, ಅಡ್ಯಾರ್ ಎಂಬಾತನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2024 ರಲ್ಲಿ ಒಂದು ಗೋ ಹತ್ಯೆ ಪ್ರಕರಣ ದಾಖಲಾಗಿರುತ್ತದೆ.ಮಂಗಳೂರಿನಲ್ಲಿ ಸ್ಥಳೀಯ ಆಹಾರ

ಆರೋಪಿಗಳು ದನ ಕಳ್ಳತನ ಮಾಡಿ ಅದನ್ನು ವಳಚಿಲ್ ಅಬ್ದುಲ್ ಖಾದರ್ ಮನೆಗೆ ಹೊಂದಿಕೊಂಡ ಶೆಡ್ ನಲ್ಲಿ ಹತ್ಯೆ ಮಾಡಿ ಮಾಂಸ ಮಾಡಲು ಸಿದ್ಧತೆ ಮಾಡಿಕೊಂಡ ಹಿನ್ನಲೆಯಲ್ಲಿ ಸದ್ರಿ ಜಾಗವನ್ನು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ -2020 ರಲ್ಲಿ ಪ್ರದತ್ತವಾದ ಅಧಿಕಾರದಂತೆ ಜಪ್ತಿ ಮಾಡಿ, ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!