ಮಂಗಳೂರು: ಹೆದ್ದಾರಿಯ ಡಿವೈಡರ್ ಏರಿದ ಖಾಸಗಿ ಎಕ್ಸ್ ಪ್ರೆಸ್ ಬಸ್
ಮಂಗಳೂರು: ಕಾರ್ಕಳದಿಂದ ಪಡುಬಿದ್ರೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಷ್ಟೊಂದು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ರ ಡಿವೈಡರ್ ಏರಿದ ಘಟನೆ ಇಂದು ಮುಂಜಾನೆ ಪಣಂಬೂರು ಬೀಚ್ ರಸ್ತೆಯ ಬಳಿ ನಡೆದಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ವೇಗವಾಗಿ ಧಾವಿಸುತ್ತಿದ್ದ ಬಸ್ಸು ಪಣಂಬೂರು ಬೀಚ್ ರಸ್ತೆಯ ಮುಂಭಾಗ ತಲುಪುತ್ತಿದ್ದಂತೆ ಏಕಾಏಕಿ ಹೆದ್ದಾರಿಯ ಡಿವೈಡರ್ ಏರಿದೆ. ಚಾಲಕ ದಿಢೀರ್ ಬ್ರೇಕ್ ಹಾಕಿ ಬಸ್ಸನ್ನು ನಿಲ್ಲಿಸಿದ್ದರಿಂದ ಹೆಚ್ಚಿನ ಅಪಾಯ ತಪ್ಪಿ ಹೋಗಿದೆ.




