ಹಾಸನ: ನೂರುಲ್ ಇರ್ಷಾದ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ
ಹಾಸನ: ಜಿಲ್ಲೆಯ ಸಕಲೇಸಪುರ ತಾಲ್ಲೂಕಿನ ಮಾರನಹಳ್ಳಿಯ ನೂರುಲ್ ಇರ್ಷಾದ್ ಜುಮ್ಮಾ ಮಸೀದಿಯಲ್ಲಿ(1500)ನೇ ವರ್ಷದ ಈದ್ ಮಿಲಾದ್ ಕಾರ್ಯಕ್ರಮವನ್ನು. ಧ್ವಜಾರೋಹಣ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಸರು ಮಾರನಹಳ್ಳಿ ಕುಂಜಿಮೋನು ಮಾತನಾಡಿ ಪೈಗಂಬರ್ ರವರ ತತ್ವ ಸಿದ್ಧಾಂತವನ್ನು ಬಿಳಿಯ ಕರಿಯ ಎಂಬಾ ಬೇದ ಬಾವವಿಲ್ಲದೆ ಸರ್ವರನ್ನು ಸಮಾನವಾಗಿ ನೋಡುವ ಪ್ರವರ್ತಿಯನ್ನು ನಾವು ಜೀವನದಲ್ಲಿ ಅಳವಡಿಸಬೇಕೆಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ಮಾರನಹಳ್ಳಿ ಸರಕಾರಿ ಶಾಲೆಯಲ್ಲಿ ಈ ವರ್ಷದ 10ನೇ ತರಗತಿಯಲ್ಲಿ ಮೊದಲ ಸ್ಥಾನ ಪಡೆದ ಹಾಗೂ 2ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಕೊಡಲಾಯಿತು. ಇದೆ ಸಂದರ್ಭದಲ್ಲಿ ನಮ್ಮ ಮದರಸ ದ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಮಾಹತ್ ಗುರುಗಳಾದ ಸಯ್ಯದ್ ಮಾರನಹಳ್ಳಿ ತಂಗಲ್ ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಎಲ್ಲಾ ಸದಸ್ಯರು ಹಾಗೂ ಜಮಾಹತ್ ಬಾಂಧವರು ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಸಹಕರಿಸಿದರು.







