March 19, 2026

ಇಸ್ರೇಲ್ ವಿಮಾನ ನಿಲ್ದಾಣದ ಮೇಲೆ ಹೌದಿ ಡ್ರೋನ್ ದಾಳಿ: ವಾಯುಪ್ರದೇಶ ತಾತ್ಕಾಲಿಕ ಬಂದ್

0
2025-04-03T090313Z_1322876762_RC28QDAX0KIL_RTRMADP_3_EL-AL-ARLNS-RUSSIA-1743921184.webp

ಜೆರುಸ್ಲೇಮ್: ಯಮೆನ್ ನ ಹೌತಿ ಬಂಡುಕೋರರು ಭಾನುವಾರ ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿದ್ದು, ಕೆಂಪು ಸಮುದ್ರದ ನಗರ ಐಲಾಟ್ ಬಳಿಯ ರಾಮನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದೆ ಮತ್ತು ಈ ಪ್ರದೇಶದ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳನ್ನು (ಐಡಿಎಫ್) ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಘಟನೆಯಿಂದ ಓರ್ವ ವ್ಯಕ್ತಿ ಗಾಯಗೊಂಡಿರುವುದಾಗಿ ಇಸ್ರೇಲ್‌ನ ಮೂಲಗಳು ಹೇಳಿವೆ. ವಿಮಾನ ನಿಲ್ದಾಣದ ಆಗಮನದ ಹಾಲ್ಗೆ ಡ್ರೋನ್ ಅಪ್ಪಳಿಸಿದ ಬಳಿಕ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರವಿವಾರ ಮೂರು ಡ್ರೋನ್ ಗಳನ್ನು ಹೌದಿಗಳು ಪ್ರಯೋಗಿಸಿದ್ದು, ಎರಡನ್ನು ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ.

ಧ್ವಂಸಗೊಂಡ ಡ್ರೋನ್ ನ ಚೂರುಗಳು ಬಡಿದು ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ದಾಳಿಯ ಬಳಿಕ ಹೌದಿಗಳ ರಾಜಕೀಯ ವಿಭಾಗದ ಅಧಿಕಾರಿ ‘ನಿಜವಾದ ಪ್ರತೀಕಾರ ಇದುವರೆಗೆ ಆರಂಭಗೊಂಡಿಲ್ಲ. ಇನ್ನೂ ಕೆಟ್ಟದ್ದು ನಿಮಗಾಗಿ ಕಾಯುತ್ತಿದೆ’ ಎಂದು ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವುದಾಗಿ ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!