March 13, 2026

ಬಂಟ್ವಾಳ: ಧಾರ್ಮಿಕ ಶಿಕ್ಷಣದ ಕಟ್ಟಡದಲ್ಲಿ ಧ್ವನಿವರ್ಧಕ ಬಳಕೆಯ ಕಾನೂನು ಉಲ್ಲಂಘನೆ ಆರೋಪ: ಪ್ರಕರಣ ದಾಖಲು

0
7-09-25-TA-bntwl.jpg

ಬಂಟ್ವಾಳ: ಧಾರ್ಮಿಕ ಶಿಕ್ಷಣದ ಕಟ್ಟಡದಲ್ಲಿ ಪರವಾನಿಗೆ ಪಡೆಯದೆ ಧ್ವನಿವರ್ಧಕ ಬಳಸಿರುವ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಕಾರ್ಯಚರಿಸುತ್ತಿರುವ ಧಾರ್ಮಿಕ ಶಿಕ್ಷಣದ ಕಟ್ಟಡವೊಂದರಲ್ಲಿ ಇತ್ತೀಚಿಗೆ ನಿರ್ಮಾಣವಾಗಿರುವ ಧಾರ್ಮಿಕ ಕೇಂದ್ರದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಧ್ವನಿವರ್ಧಕ ಅಳವಡಿಸಿಕೊಂಡು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧ್ವನಿಯಲ್ಲಿ ದಿನಕ್ಕೆ 05 ಬಾರಿಯಂತೆ ಅಜಾನ್ ಕೂಗಿರುವುದರಿಂದ ಸುತ್ತಮುತ್ತಲಿನ ಪರಿಸರದಲ್ಲಿರುವ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ ಧ್ವನಿವರ್ಧಕಗಳ ಬಳಕೆಯ ಬಗೆಗಿನ ಕಾನೂನನ್ನು ಉಲ್ಲಂಘಿಸಿರುತ್ತಾರೆ ಎಂಬುದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ನೀಡಿದ ದೂರನಲ್ಲಿ ತಿಳಿಸಲಾಗಿದೆ. ದೂರನ್ನು ಸ್ವೀಕರಿಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ಅ.ಕ್ರ 133/2025 ಕಲಂ:37,92 (ಐ), 109 ಕೆಪಿ ಆಕ್ಟ್‌ ಹಾಗೂ 292 ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!