ಶಿವಮೊಗ್ಗ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಪ್ರಯಾಣಿಕರಿಗೆ ಗಾಯ
ಶಿವಮೊಗ್ಗ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಪ್ರ ಯಾಣಿಕರು ಗಾಯಗೊಂಡಿರುವ ಘಟನೆ ಗುರುವಾರ ತಾಲ್ಲೂಕಿನ ಚಿನ್ನಮನೆ ಸಮೀಪ ನಡೆದಿದೆ.
ಕಾರು ಶಿವಮೊಗ್ಗ ಕಡೆಯಿಂದ ಆಯನೂರು ಮಾರ್ಗವಾಗಿ ರಿಪ್ಪನ್‌ಪೇಟೆ ಕಡೆಗೆ ತೆರಳುತಿತ್ತು. ಹೆದ್ದಾರಿಯಲ್ಲಿ ಸಾಗುವಾಗ ಮಾವಿನ ಮರ ಉರುಳಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿವಾಗಿದೆ.
ಕೂಡಲೇ ಸ್ಥಳೀಯರು, ಇತರೆ ವಾಹನ ಸವಾರರು ಕಾರಿನ ಲ್ಲಿದ್ದವರನ್ನು ರಕ್ಷಿಸಿ ಆಯನೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಕಾರಿನ ಮೇಲ್ಬಾಗ ಸಂಪೂರ್ಣ ಹಾನಿಯಾಗಿದ್ದು, ಗಾಜುಗಳು ಒಡೆದು ಹೋಗಿವೆ.




