March 13, 2026

ಕನ್ಯಾನದಲ್ಲಿ ಸುನ್ನೀ ಸೆಂಟರ್ ಉದ್ಘಾಟನೆ

0
image_editor_output_image-1596680656-1756827782222

ವಿಟ್ಲ: ಕನ್ಯಾನ ಟೌನಿನಲ್ಲಿ ನೂತನವಾಗಿ ನಿರ್ಮಾಣವಾದ  ಖುರ್ರತುಸ್ಸಾದಾತ್ ಮೆಮೋರಿಯಲ್, ತಾಜುಲ್ ಉಲಮಾ ಸುನ್ನೀ ಸೆಂಟರ್ ಕಟ್ಟಡವನ್ನು ದಿನಾಂಕ 2025 ಆಗಸ್ಟ್ 31 ಆದಿತ್ಯವಾರ ಬೆಳಿಗ್ಗೆ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ ಊದ್ ತಂಙಳ್ ಅಲ್ ಬುಖಾರಿ ಕೂರತ್ ಉದ್ಘಾಟಿಸಿದರು.

ಮಹ್ಮೂದ್ ಫೈಝಿ ವಾಲೆಮುಂಡೋವು ಉಸ್ತಾದ್, ಕೆ.ಎಂ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್, ಕೆ‌.ಪಿ ಸಿರಾಜುದ್ದೀನ್ ಸಖಾಫಿ ಮೊದಲಾದವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಅಬ್ದುಲ್ ಹಮೀದ್ ಸಖಾಫಿ ಪಾಡಿ, ಸುಲೈಮಾನ್ ಸಖಾಫಿ ಅಂಗ್ರಿ, ಸುನ್ನೀ ಸೆಂಟರ್ ಯೋಜನೆಯ ಪ್ರಾರಂಭದಿಂದಲೂ ಇದಕ್ಕೆ ಬೇಕಾದ ಮುತುವರ್ಜಿವಹಿಸಿದ ಅಬ್ದುಲ್ ಮಾಲಿಕ್ ಅಮಾನಿ, ರಹ್ಮಾನಿಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಬಾಯಾರ್, ಪ್ರಧಾನ ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ, ಕನ್ಯಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ ಪಿ ಅಬ್ದುರ್ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು.

ಸಂಜೆ ಏಳು ಘಂಟೆಗೆ ನಡೆದ ಮತ ಪ್ರವಚನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಸೆಂಟರ್ ನಿರ್ಮಾಣ ಸಮಿತಿ ಚೆಯರ್ಮಾನ್ ಮುಹಮ್ಮದ್ ಹಾಜಿ ಬಂಡಿತ್ತಡ್ಕ ವಹಿಸಿದರು.

ಅಬೂಬಕ್ಕರ್ ಸುನ್ನೀ ಫೈಝಿ ಪೆರುವಾಯಿ ದುಆ ನೆರವೇರಿಸಿದರು.
ಕೆ.ಎಂ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್ ಉದ್ಘಾಟಿಸಿದರು.
ಜಾಮಿಅ ಮರ್ಕಝ್ PRD ಡೈರಕ್ಟರ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಅಹ್ದಲ್ ಮುತ್ತನ್ನೂರ್ ಮುಖ್ಯ ಪ್ರಭಾಷಣಗೈದರು.
ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುನ್ನುಡಿ ಬಾಷಣ ಮಾಡಿದರು‌. ಅಬ್ದುಲ್ ಹಕೀಂ‌ ಮದನಿ ಕರೋಪಾಡಿ, ಕೆ.ಎಸ್ ಇಬ್ರಾಹಿಂ ಮದನಿ, ಸುನ್ನೀ ಸೆಂಟರ್ ನಿರ್ಮಾಣ ಸಮಿತಿ ಕೋಶಾಧಿಕಾರಿ ಅಬ್ದುಲ್ ಖಾದರ್ ಸಅದಿ, SYS ಕನ್ಯಾನ ಸರ್ಕಲ್ ಅಧ್ಯಕ್ಷ ಅಬೂಬಕ್ಕರ್ ಸ ಅದಿ ಕರೋಪಾಡಿ, ಹೈದರಲಿ ಸಅದಿ, ಸುನ್ನೀ ನಿರ್ಮಾಣ ಸಮಿತಿ ಜನರಲ್‌ ಕನ್ವೀನರ್ ಡಿ ಕೆ ಹಸನ್ ಕರೀಂ‌ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿಯ ಕನ್ವೀನರ್ ಕೆ ಎಂ ಅಶ್ರಫ್ ಸಖಾಫಿ ಕನ್ಯಾನ ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!