ರೇಣುಕಾಸ್ವಾಮಿ ಕೊಲೆ ಕೇಸ್: A1 ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿ ವಜಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾಗೌಡ ಜಾಮೀನು ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಕಳೆದ ವಾರ ಈ ಅರ್ಜಿಯ ಬಗ್ಗೆ ಹಿರಿಯ ವಕೀಲ ಬಾಲನ್ ಅವರು ಪವಿತ್ರಾಗೌಡ ಪರವಾಗಿ ವಾದ ಮಂಡಿಸಿದ್ದರು. ತಾಂತ್ರಿಕ ಅಂಶಗಳ ಆಧಾರದ ಮೇಲೆ ಜಾಮೀನು ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ಇದೀಗ ಎ1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ.
ಇದರಿಂದಾಗಿ ನಟಿ, ಕಲಾವಿದೆ, ಕೋಲೆ ಕೇಸ್ ನ ಎ1 ಆರೋಪಿ ಪವಿತ್ರಾಗೌಡಗೆ ನಿರಾಶೆಯಾಗಿದೆ. ನಟಿ ಪವಿತ್ರಾಗೌಡ ಜೈಲು ವಾಸ ಮುಂದುವರಿಯಲಿದೆ.




