March 13, 2026

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಯುವಕ ಸಾವು

0
image_editor_output_image1954814956-1756797549104.jpg

ರಾಯಚೂರು: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುವಾಗ ಯುವಕನೋರ್ವ ಕುಸಿದು ಬಿದ್ದು, ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ತೀನ್ ಖಂದಿಲ್ ವೃತ್ತದ ಬಳಿ ನಡೆದಿದೆ.

ಅಭಿಷೇಕ್ (24) ಮೃತ ಯುವಕ. ಗಣೇಶ ವಿಸರ್ಜನೆಯ ವೇಳೆ ರಾತ್ರಿಯಿಡೀ ಡಿಜೆ ಸೌಂಡ್ಸ್ಗೆ ಡ್ಯಾನ್ಸ್ ಮಾಡಿ ಅಭಿಷೇಕ್ ಸುಸ್ತಾಗಿ ಕುಸಿದು ಬಿದ್ದಿದ್ದ. ಅದೇ ವೇಳೆ ಆತನಿಗೆ ಏಕಾಏಕಿ ಫಿಟ್ಸ್ ಕಾಣಿಸಿಕೊಂಡಿದೆ.

ಕೂಡಲೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಭಿಷೇಕ್ ಮೃತಪಟ್ಟಿದ್ದಾನೆ. ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!