ದುಲೀಪ್ ಟ್ರೋಫಿ: ನಾಯಕ ಸ್ಥಾನಕ್ಕೆ ಕಾಸರಗೋಡು ಮೂಲದ ಅಝರುದ್ದೀನ್ ಆಯ್ಕೆ
ಕಾಸರಗೋಡು: ಕೇರಳದ ಬ್ಯಾಟರ್ ಕಾಸರಗೋಡಿನ ತಳಂಗರದ ಮುಹಮ್ಮದ್ ಅಝರುದ್ದೀನ್ ಉತ್ತರ ವಲಯದ ವಿರುದ್ಧ ಬೆಂಗಳೂರಿನಲ್ಲಿ ಸೆ.4ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ಬದಲಿಗೆ ದಕ್ಷಿಣ ವಲಯ ತಂಡದ ನಾಯಕತ್ವ ವಹಿಸಲಿದ್ದಾರೆ.
ದಕ್ಷಿಣ ವಲಯದ ನಾಯಕನಾಗಿ ಈ ಹಿಂದೆ ನೇಮಿಸಲ್ಪಟ್ಟಿದ್ದ ತಿಲಕ್ ಅವರು ಮುಂಬರುವ ಏಶ್ಯ ಕಪ್‌ಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಕಾರಣ ದುಲೀಪ್ ಟ್ರೋಫಿಯಲ್ಲಿ ಆಡುತ್ತಿಲ್ಲ.
ದಕ್ಷಿಣ ವಲಯದ ಉಪ ನಾಯಕನಾಗಿದ್ದ ಅಝರುದ್ದೀನ್‌ರನ್ನು ಇದೀಗ ನಾಯಕನಾಗಿ ಭಡ್ತಿ ನೀಡಲಾಗಿದ್ದು, ತಮಿಳುನಾಡಿನ ಎನ್.ಜಗದೀಶನ್ ರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.
ಪರಿಷ್ಕೃತ ದಕ್ಷಿಣ ವಲಯ ತಂಡ:
ಮುಹಮ್ಮದ್ ಅಝರುದ್ದೀನ್(ನಾಯಕ), ತನ್ಮಯ್ ಅಗರ್ವಾಲ್, ದೇವದತ್ತ ಪಡಿಕ್ಕಲ್, ಮೋಹಿತ್ ಕಾಳೆ, ಸಲ್ಮಾನ್ ನಿಝಾರ್, ನಾರಾಯಣ ಜಗದೀಶನ್, ತ್ರಿಪುರಣ ವಿಜಯ್, ತನ್ಮಯ್ ತ್ಯಾಗರಾಜನ್, ವಿಜಯಕುಮಾರ್, ನಿದೀಶ್ ಎಂ.ಡಿ., ರಿಕಿ ಭುಯ್, ಬಾಸಿಲ್ ಎನ್.ಪಿ., ಗುರ್ಜನೀತ್ ಸಿಂಗ್, ಸ್ನೇಹಲ್ ಕೌಥಂಕರ್, ಅಂಕಿತ್ ಶರ್ಮಾ, ಶೇಕ್ ರಶೀದ್




