February 1, 2026

ಮೂಡುಬಿದಿರೆ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್ ದಾಳಿ: ಇಬ್ಬರು ಆರೋಪಿಗಳ ಬಂಧನ

0
image_editor_output_image-2033188373-1756302575998.jpg

ಮೂಡುಬಿದಿರೆ: ಮೂಡಬಿದಿರೆಯ ಮಾರ್ಪಾಡಿ ಗ್ರಾಮದ ಆಳ್ವಾಸ್ ಆಸ್ಪತ್ರೆ ಕಡೆಗೆ ಹೋಗುವ ರಸ್ತೆಯಲ್ಲಿರುವ ಮಹಡಿ ಕಟ್ಟಡದ ರೂಂ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಕೇಂದ್ರಕ್ಕೆ ಪೊಲೀಸ್ ಇನ್ ಸೆಕ್ಟರ್ ಸಂದೇಶ್ ಪಿ.ಜಿ. ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಆಗಸ್ಟ್ 26ರ ರಾತ್ರಿ 8.00 ಗಂಟೆಗೆ ಈ ಕಾರ್ಯಚರಣೆ ನಡೆದಿದೆ. ಸಂತ್ರಸ್ತ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಬಂಧಿತ ಆರೋಪಿಗಳಾದ ಮೂಡಬಿದರೆ ತಾಲೂಕು , ಮಾರ್ಪಾಡಿ ಗ್ರಾಮದ ರಾಜೇಶ್ ಬೋವಿ (31 ವರ್ಷ), ಬೆಳ್ತಂಗಡಿ ತಾಲೂಕು ನಾರಾವಿ ನಿವಾಸಿ ಭರತ್ ಜೈನ್ ಎಂದು ಗುರುತಿಸಲಾಗಿದೆ

ಭರತ್ ಜೈನ್ ಸದ್ರಿ ಸಂತ್ರಸ್ತ ಮಹಿಳೆಯನ್ನು ಮುಂದಿಟ್ಟುಕೊಂಡು ಗ್ರಾಹಕರಿಗೆ ತೋರಿಸಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ತಿಳಿದು ಬಂದಿರುತ್ತದೆ. ಆರೋಪಿ ಭರತ್ ಜೈನ್ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆ ಸಹಿತ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಆರೋಪಿಗಳ‌ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!