February 2, 2026

ಅಡ್ಯಾಲು: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ-ಮೊಸರು ಕುಡಿಕೆ ಉತ್ಸವ

0
image_editor_output_image1624996248-1756223792132

ವಿಟ್ಲ: ಯುವ ಜನತೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು
ಶ್ರೀಕಾಂತ್ ಬೀರಾವು ಹೇಳಿದರು.

ಅವರು  ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಡ್ಯಾಲು ವಿನಲ್ಲಿ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ನಡೆದಾಗ ಸಹಬಾಳ್ವೆ ಸಂಘಟನೆ ಸಾಮರಸ್ಯದ ಜೀವನವನ್ನು ನಾವು ನೋಡಬಹುದು ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅತಿಥಿಯಾಗಿ ಆಗಮಿಸಿದ ಮೋಹನ್ ಗುರ್ಜಿನಡ್ಕ ಮಾತನಾಡಿ ಯುವ ಜನತೆಯನ್ನು ಒಂದೇ ಮಗ್ಗುಲಲ್ಲಿ ಕರಕೊಂಡು ಹೋದಾಗ ಸಮಾಜದಲ್ಲಿ ಒಗ್ಗಟ್ಟನ್ನು ನಾವು ಕಾಣಬಹುದು.ಅದಕ್ಕೆ ಅಡ್ಯಾಲುವಿನಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವವೇ ಕಾರಣ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಶಶಿ ಸಂಪ್ಯ ಹಾಗೂ ಜಗದೀಶ ಬಾಕಿಮಾರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿನೇಶ್ ಸಾಲ್ಯಾನ್ ಬನ್ನೂರು ವಹಿಸಿದ್ದರು. ವೇದಿಕೆಯಲ್ಲಿ ದಾಮೋದರ ಪೂಜಾರಿ ಕಲ್ಲಂದಡ್ಕ.ಹರೀಶ್ ಬಾಕಿಮಾರು.ಗುಡ್ಡಪ್ಪ ಪೂಜಾರಿ ಮಂಗಳೂರು.ಶ್ರೀಮತಿ ಜಾನಕಿ ಸೆಲ್ವರಾಜ್ ಅಡ್ಯಾಲು.ಶ್ರೀಮತಿ ಉಮಾವತಿ ಅಡ್ಯಾಲು.ಶ್ರೀಮತಿ ಶಾರದಾ ಅಡ್ಯಾಲು.ಉಪಸ್ಥಿತರದ್ದರು.
ಬೆಳ್ಳಿಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಯಾ ಪೂಜಾರಿ ಅಡ್ಯಾಲು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆನಂದ ಪೂಜಾರಿ ಅಡ್ಯಾಲು.ರವಿ ಮಂದಾರ ಕರ್ಗಲ್ಲು.ಲಕ್ಷ್ಮೀಶ ಓಜಾಲ.ಚೇತನ್ಅಡ್ಯಾಲು.ನಿಖಿಲ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಪ್ರತಿಭೆಗಳಾದ ಸಂಜನಾ ಕರ್ಗಲ್ಲು ಹಾಗೂ ಶ್ರುತಿಕಾ ಬಾಕಿಮಾರು ಇವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.

ಅದೇ ರೀತಿ ಮೊಸರು ಕುಡಿಕೆ ಉತ್ಸವಕ್ಕೆ ಪ್ರತಿ ವರ್ಷ ಸಹಕಾರ ನೀಡುತ್ತಿರುವ ಶ್ರೀ ದಿನೇಶ್ ಸಾಲ್ಯಾನ್ ಹಾಗೂ ಶ್ರೀ ಕಾಂತ್ ಬೀರಾವು ಇವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಗೌರವಿಸಲಾಯಿತು.


ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಯುವ ಪ್ರೆಂಡ್ಸ್ ಕಬಕ ಹಾಗೂ ಶ್ರೀ ಮಹಾಲಿಂಗೇಶ್ವರ ಕನ್ಸ್ಟ್ರಕ್ಷನ್ ಮಿತ್ತೂರು ಇವರ ಸಹಭಾಗಿತ್ವದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಪೂವಪ್ಪ ಅಡ್ಯಾಲು.ದೀಪಾ ಅಡ್ಯಾಲು.ಆಶೀತ್ ಅಡ್ಯಾಲು.ಪುರುಷೋತ್ತಮ ಬೈರಿಕಟ್ಟೆ ಸಹಕರಿಸಿದರು.
ಕಾರ್ಯಕ್ರಮದ ಮೊದಲಿಗೆ ಪ್ರಶಾಂತ್ ಕರ್ಗಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!