ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಹನ್ನೊಂದು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೆ.ಆರ್. ಮಾರುಕಟ್ಟೆ ಬಳಿ ಭಾನುವಾರ ನಡೆದಿದೆ.
ಜಿ.ಎಂ. ಪಾಳ್ಯ ನಿವಾಸಿ ಶಬರೀಶ್ ಮೃತ ಬಾಲಕ. ಸ್ಥಳೀಯ ದೇವಸ್ಥಾನದ ಅರ್ಚಕರಾಗಿರುವ ಸುನೀಲ್ ಕುಮಾರ್ ಅವರು ತನ್ನ ಅಣ್ಣ ದಿ.ದಿಲೀಪ್ ಕುಮಾರ್ ಪುತ್ರ ಶಬರೀಶ್ ಜೊತೆಗೆ ದ್ವಿಚಕ್ರ ವಾಹನದಲ್ಲಿ ಕೆ.ಆರ್.ಮಾರುಕಟ್ಟೆಗೆ ಆಗಮಿಸಿದ್ದರು.