February 1, 2026

ವಿಧಾನಸಭೆ ಅಧಿವೇಶನದಲ್ಲಿ RSS ಗೀತೆಯನ್ನು ಹಾಡಿದ ಡಿ.ಕೆ ಶಿವಕುಮಾರ್

0
image_editor_output_image285133011-1755860443980.jpg

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಚರ್ಚೆ ನಡೆಯುವ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ‘ನಮಸ್ತೆ ಸದಾ ವತ್ಸಲೆ ಮಾತೃಭೂಮಿ’ ಎನ್ನುವ ಆರ್‌ಎಸ್ಎಸ್ ಗೀತೆಯ ಕೆಲವು ಸಾಲುಗಳನ್ನು ಹಾಡಿದ್ದಾರೆ.

ಕಾಲ್ತುಳಿತ ಸಂಬಂಧ ಸದನಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉತ್ತರ ನೀಡುತ್ತಿದ್ದರು. ಘಟನೆಗೆ ಡಿ.ಕೆ ಶಿವಕರ್ಮಾ ಅವರೇ ಕಾರಣ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು. ಅವರು, ಏರ್‌ಪೋರ್ಟ್‌ಗೆ ಹೋಗಿದ್ದನ್ನು, ಕನ್ನಡ ಬಾವುಟ ಹಿಡಿದ್ದನ್ನು ಉಲ್ಲೇಖಿಸಿದರು.

ಇದಕ್ಕೆ ಉತ್ತರಿಸಿದ ಡಿ.ಕೆ ಶಿವಕುಮಾರ್, ‘ನಾನು ಕೆಎಸ್‌ಸಿಎ ಸದಸ್ಯ. ಕೆಎಸ್‌ಸಿಎ ಕಾರ್ಯದರ್ಶಿ ನನ್ನ ಬಾಲ್ಯ ಸ್ನೇಹಿತ. ನಾನು ಬೆಂಗಳೂರು ಉಸ್ತುವಾರಿ ಸಚಿವ. ನಾನು ಅಂದು ಏರ್‌ಪೋರ್ಟ್‌ಗೆ ಹೋಗಿದ್ದೆ, ಕನ್ನಡ ಬಾವುಟವನ್ನೂ ಹಿಡಿದಿದ್ದೆ. ನಾನು ಆರ್‌ಸಿಬಿ ಆಟಗಾರರನ್ನು ಅಭಿನಂದಿಸಿ, ಕಪ್‌ಗೆ ಮುತ್ತೂ ಕೊಟ್ಟಿದ್ದೆ. ನಾನು ನನ್ನ ಕೆಲಸ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!